ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ.. ಜನರ ಸಹಕಾರ ಕೋರಿದ ಪೊಲೀಸ್‌ ವರಿಷ್ಠಾಧಿಕಾರಿಗಳು.. - haveri latest news

ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿದ್ದರೂ ಕೂಡಾ ಜಿಲ್ಲೆಯಲ್ಲಿ ಜನರು ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಹಾಗಾಗಿ ಎಸ್​ಪಿ ಕೆ.ಜಿ. ದೇವರಾಜ್ ಜನತೆಯ ಸಹಕಾರ ಕೋರಿದ್ದಾರೆ.

Violation of LuckDown in Haveri: SP requested the cooperation of the people
ಹಾವೇರಿಯಲ್ಲಿ ಲಾಕ್​ಡೌನ್​ ಉಲ್ಲಂಘನೆ: ಜನರ ಸಹಕಾರ ಕೋರಿದ ಎಸ್​​ಪಿ

By

Published : Apr 12, 2020, 10:47 AM IST

ಹಾವೇರಿ :ಲಾಕ್​ಡೌನ್​​ ಪದೇಪದೆ ಉಲ್ಲಂಘನೆಯಾಗುತ್ತಿದೆ. ಜನರು ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಎಸ್​ಪಿ ಕೆ ಜಿ ದೇವರಾಜ್ ಮನವಿ ಮಾಡಿದ್ದಾರೆ.

ಮನೆಯಲ್ಲಿರಿ ಆರೋಗ್ಯವಾಗಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿ..

ಪೊಲೀಸ್, ಆರೋಗ್ಯ ಸೇರಿ ವಿವಿಧ ಇಲಾಖೆಗಳು ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿವೆ. ಆದರೆ, ಜನರ ಉದ್ಧಟತನ ಮಾತ್ರ ನಿಂತಿಲ್ಲ. ಕಳೆದ 23ರಿಂದ ಬೈಕ್ ಸವಾರರನ್ನ ಪರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ 23 ರಿಂದ ಈವರೆಗೆ 550 ವಾಹನಗಳನ್ನ ಸೀಜ್ ಮಾಡಲಾಗಿದೆ. ಲಾಕ್​ಡೌನ್‌ಗೆ ಸಂಬಂಧಿಸಿದಂತೆ 10 ಕೇಸ್ ದಾಖಲು ಮಾಡಲಾಗಿದೆ. ರಸ್ತೆ ನಿಯಮ ಉಲ್ಲಂಘಿಸಿದವರಿಂದ 14 ಲಕ್ಷ ದಂಡ ಹಣ ವಸೂಲಿ ಮಾಡಲಾಗಿದೆ. ಇಷ್ಟಾದರೂ ಸಹ ನಿಯಮ ಉಲ್ಲಂಘನೆಯಾಗುತ್ತಿದೆ. ಹಾಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಜನರ ಸಹಕಾರ ಕೋರಿದ್ದಾರೆ.

ಜಿಲ್ಲೆಯಲ್ಲಿ ತಬ್ಲಿಘಿಗಳ ಸಂಖ್ಯೆ ಅತಿಯಾಗಿಲ್ಲ. ಈಗಾಗಲೇ ದೆಹಲಿಗೆ ವಿವಿಧ ಕಾರಣಗಳಿಂದ ಹೋದವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಅವರ ಫಲಿತಾಂಶ ನೆಗೆಟಿವ್ ಬಂದಿದೆ. ಈ ಹೊರತಾಗಿ ಸಹ ಜಿಲ್ಲೆಯಲ್ಲಿ ಯಾರಾದರು ತಬ್ಲಿಘಿಗಳಿದ್ದರೆ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಒಳಗಾಗಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.

ABOUT THE AUTHOR

...view details