ಹಾವೇರಿ: ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಭಯಭೀತರಾಗಿದ್ದು, ಸ್ವಯಂ ಪ್ರೇರಿತರಾಗಿ 15 ದಿನಗಳ ಕಾಲ ನಿರ್ಬಂಧ ಹಾಕಿಕೊಂಡಿದ್ದಾರೆ.
ಕೊರೊನಾ ನಿಯಂತ್ರಿಸಲು ಸ್ವಯಂ ದಿಗ್ಬಂಧನ... ಅನ್ಯರಿಗೆ ಗ್ರಾಮ ಪ್ರವೇಶ ನಿಷಿದ್ಧ..! - Haveri news 2020
ಜಗತ್ತಿನಾದ್ಯಾಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ತನ್ನ ಮುಷ್ಠಿಗೆ ಸಿಲುಕಿದ ಸಾಕಷ್ಟು ಜನರನ್ನು ಈಗಾಗಲೇ ಬಲಿ ಪಡೆದುಕೊಂಡಿದೆ.ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ಭಯಭೀತರಾಗಿದ್ದು, ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದಾರೆ.
ಕೊರೊನಾ ತಡೆಯಲು ಸ್ವಯಂ ದಿಗ್ಬಂಧನ ಹೇರಿಕೊಂಡ ಗ್ರಾಮಸ್ಥರು
ಮುಂದಿನ 15 ದಿನಗಳ ಕಾಲ ಗ್ರಾಮದಿಂದ ಯಾರೂ ಕೂಡಾ ಬೇರೆ ಕಡೆ ತೆರಳುವಂತಿಲ್ಲ. ಅಲ್ಲದೆ ಈ ದಿನಗಳಲ್ಲಿ ಬೇರೆಡೆಯಿಂದಲೂ ಜನರು ಬಾರದಂತೆ ಎಚ್ಚರ ವಹಿಸಿರುವ ಯುವಕರ ಪಡೆ ಹಗಲು ರಾತ್ರಿ ಗ್ರಾಮವನ್ನು ಕಾಯುತ್ತಿದ್ದಾರೆ.
ಊರಿನ ಪ್ರತಿ ಮನೆಗಳ ಸದಸ್ಯರು ಪಾಳೆ ಪ್ರಕಾರ ಗಡಿಯಲ್ಲಿ ದೊಣ್ಣೆ ಹಿಡಿದು ಕಾಯುತ್ತಿದ್ದು, ಕೊರೊನಾ ಸೋಂಕು ಗ್ರಾಮಕ್ಕೆ ಬರದಂತೆ ತಡೆಯಲು ಈ ರೀತಿ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.