ಹಾವೇರಿ: ಜಿಲ್ಲೆಯ ಅಗಡಿ ಗ್ರಾಮದಲ್ಲಿ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲಾ ಕಡೆ ದೇಶಭಕ್ತಿ ಗೀತೆ, ಭಾರತಾಂಬೆಯ ಜಯಘೋಷಗಳು ಕೇಳಿಬರುತ್ತಿದ್ದವು. ಅಗಡಿ ಗ್ರಾಮಸ್ಥರ ಈ ಸಂಭ್ರಮಕ್ಕೆ ಕಾರಣ ಗ್ರಾಮದಿಂದ 17 ವರ್ಷಗಳ ಹಿಂದೆ ಸೈನ್ಯಕ್ಕೆ ಸೇರಿದ ಯೋಧರು ನಿವೃತ್ತರಾಗಿ ಗ್ರಾಮಕ್ಕೆ ವಾಪಸ್ ಬಂದಿದ್ದು.
ನಿವೃತ್ತರಾಗಿ ತವರಿಗೆ ಬಂದ ಯೋಧರಿಗೆ ಅದ್ಧೂರಿ ಸ್ವಾಗತ - ಸೈನಿಕರಾಗಿದ್ದಕ್ಕೆ ಸಾರ್ಥಕವಾಯಿತು ಎಂಬ ಅಭಿಪ್ರಾಯ
ಜಿಲ್ಲೆಯ ಅಗಡಿ ಗ್ರಾಮದಲ್ಲಿ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲಾ ಕಡೆ ದೇಶಭಕ್ತಿ ಗೀತೆ, ಭಾರತಾಂಬೆಯ ಜಯಘೋಷಗಳು ಕೇಳಿಬರುತ್ತಿದ್ದವು. ಅಗಡಿ ಗ್ರಾಮಸ್ಥರ ಈ ಸಂಭ್ರಮಕ್ಕೆ ಕಾರಣ ಗ್ರಾಮದಿಂದ 17 ವರ್ಷಗಳ ಹಿಂದೆ ಸೈನ್ಯಕ್ಕೆ ಸೇರಿದ ಯೋಧರು ನಿವೃತ್ತರಾಗಿ ಗ್ರಾಮಕ್ಕೆ ವಾಪಸ್ ಬಂದಿದ್ದು.
ಹೌದು, ಗ್ರಾಮದ ನಜೀರ್ ಅಹ್ಮದ್, ಲಕ್ಷ್ಮಣ ಹಾಗೂ ಪಕ್ಕದ ಗ್ರಾಮದ ಜಗದೀಶ್ ಎಂಬ ಯೋಧರು 17 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಭಾರತಮಾತೆಯ ಸೇವೆ ಮಾಡಿ ನಿವೃತ್ತಿಯಾಗಿ ಗ್ರಾಮಕ್ಕೆ ಮರಳಿದ್ದಾರೆ. ಹಾವೇರಿಗೆ ಆಗಮಿಸುತ್ತಿದ್ದಂತೆ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ನಂತರ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಗಿರಿಯ ಯೋಧ ಜಗದೀಶ್‌ರನ್ನು ಸಹ ಗೌರವಿಸಲಾಯಿತು. ನಂತರ ಆಗಡಿ ಗ್ರಾಮಕ್ಕೆ ಅದ್ಧೂರಿಯಾಗಿ ಯೋಧರನ್ನ ಕರೆ ತರಲಾಯಿತು. ಈ ಸಂಭ್ರಮ ಸಡಗರ ಕಂಡ ನಿವೃತ್ತ ಯೋಧರು ತಾವು ಸೈನಿಕರಾಗಿದ್ದಕ್ಕೆ ಸಾರ್ಥಕವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.