ಹಾನಗಲ್: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರ್ದಿ ಮತ್ತು ಶಾಡಗುಪ್ಪಿ ಗ್ರಾಮಸ್ಥರು ಊರಿಗೆ ಬೇಲಿ ಹಾಕಿ ಊರಿಗೆ ಯಾರೂ ಬರದಂತೆ ನಿಷೇಧ ಹೇರಿದ್ದಾರೆ.
ಕೊರೊನಾ ಕಂಟಕ: ಊರಿಗೆ ಬೇಲಿ ಹಾಕಿ ಯಾರೂ ಬರದಂತೆ ನಿಷೇಧ - vardi and shadaguppi village of hanagal
ನೀವು ಬದುಕಿ ನಮ್ಮನ್ನು ಬದುಕಿಸಿ ಎಂದು ಎರಡು ಗ್ರಾಮಗಳ ಗ್ರಾಮಸ್ಥರು ಮುಳ್ಳಿನ ಬೇಲಿ ಹಾಕಿ, ಊರಿಗೆ ಯಾರೂ ಬರದಂತೆ ನಿಷೇಧ ಹೇರಿದ್ದಾರೆ.
village
ಬೇರೆ ಬೇರೆ ಊರುಗಳಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಬೇಲಿ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಊರಿನಿಂದ ಯಾರೂ ಬೇರೆ ಊರುಗಳಿಗೆ ಹೋಗುವಂತಿಲ್ಲ ಹಾಗೂ ಬೇರೆ ಊರುಗಳಿಂದ ಯಾರೂ ತಮ್ಮೂರಿಗೆ ಬರುವಂತಿಲ್ಲ ಎಂದು ನಿಷೇಧ ಹೇರಿದ್ದಾರೆ.
ಕೊರೊನಾ ಸೋಂಕು ತಡೆಯಲು ಸಹಕರಿಸಿ. ನೀವು ಬದುಕಿ ನಮ್ಮನ್ನು ಬದುಕಿಸಿ ಎಂದು ಎರಡು ಗ್ರಾಮಗಳ ಗ್ರಾಮಸ್ಥರು ಮುಳ್ಳಿನ ಬೇಲಿ ಹಾಕಿ ಊರಿನ ರಸ್ತೆಗಳನ್ನ ಬಂದ್ ಮಾಡಿದ್ದಾರೆ.