ಹಾವೇರಿ:ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆಯ ಈ ಹಳ್ಳಿ ಇಂದಿಗೂ ಮೂಲಸೌಕರ್ಯದಿಂದ ವಂಚಿತವಾಗಿದೆ. ಸರಿಯಾದ ರಸ್ತೆ ಸೌಕರ್ಯ ಇಲ್ಲದೇ ಗ್ರಾಮಸ್ಥರು ಪಡಬಾರದ ಕಷ್ಟ ಪಡುತ್ತಿದ್ದಾರೆ. ದಶಕಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ಶಿಗ್ಗಾವಿ ತಾಲೂಕಿನ ಗೌಳೇರದಡ್ಡಿಯಲ್ಲಿ ನೆಲೆಸಿರುವ 19 ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ದೂರದ ಮಾತಾಗಿದೆ.
ಸುಮಾರು 40 ಮತದಾರರಿರುವ ಈ ಗ್ರಾಮಕ್ಕೆ ಪಡಿತರ ವಿತರಣೆಯಾಗುವುದು ಬಿಟ್ಟರೆ ಸರ್ಕಾರದ ಬೇರೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಶಿಗ್ಗಾವಿಯ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಮೂಲ ಸೌಲಭ್ಯಗಳು ಗಗನಕುಸುಮವಾಗಿವೆ. ಅಲ್ಲದೇ ಕಾಡಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ನಿರಂತರ ಕರಡಿ ದಾಳಿ ನಡೆಯುತ್ತಲೇ ಇರಲಿದೆ ಎಂಬುದು ಸ್ಥಳೀಯರ ಅಳಲಾಗಿದೆ.