ರಾಣೆಬೆನ್ನೂರು: ನಗರದಲ್ಲಿನ ವಾಹನ ಸಂಚಾರ ಬಂದ್ ಮಾಡುವ ಬದಲಾಗಿ ಪೊಲೀಸರು ದಂಡ ಹಾಕಿ ಕಳುಹಿಸುತ್ತಿದ್ದಾರೆ.
ಎಷ್ಟು ಹೇಳಿದರೂ ಕೇಳದ ಜನ.. ವಾಹನ ಸವಾರರಿಗೆ ದಂಡದ ಬಿಸಿ - ranibennuru halageri cross
ರಾಣೆಬೆನ್ನೂರು ನಗರದ ಹಲಗೇರಿ ವೃತ್ತದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಪೊಲೀಸರು ಕಾನೂನು ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹಲಗೇರಿ ವೃತ್ತದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇಲ್ಲಿ ಸುಮಾರು ಹತ್ತು ಪೊಲೀಸರ ಜೊತೆಯಾಗಿ ಪಾಟ್ರೋಲಿಂಗ್ ಸಿಬ್ಬಂದಿ, ಹೋಂ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆದರೆ, ಪೊಲೀಸರು ಮಾತ್ರ ಇಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಿ ಅವರ ಡಿಎಲ್, ಹೆಲ್ಮೆಟ್ ,ಇನ್ಸೂರೆನ್ಸ್, ಗಾಡಿ ಫಿಟ್ನೆಸ್ ಪತ್ರ ಪರಿಶೀಲನೆ ಮಾಡುತ್ತಿದ್ದಾರೆ. ಇವುಗಳು ಇಲ್ಲದಿದ್ದರೆ ಐದು ನೂರು ದಂಡ ಹಾಕಿ ಕಳುಹಿಸಲಾಗುತ್ತದೆ.
ಇನ್ನು ಇದರಿಂದ ಭಾರತದ ಲಾಕ್ ಡೌನ್ ಕ್ರಮವನ್ನು ಪೊಲೀಸರು ಇಲ್ಲಿ ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ ಎಂಬುದು ಕಂಡು ಬಂದಿದೆ.