ರಾಣೆಬೆನ್ನೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಕಮದೋಡ ಗ್ರಾಮದ ಬಳಿ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು - Ranebennur latest crime news
ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಣೆಬೆನ್ನೂರು ತಾಲೂಕಿನ ಕಮದೋಡ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ
ಕಮದೋಡ ಗ್ರಾಮದ ಮೀನಮ್ಮ ಹುಲ್ಲತ್ತಿ (50) ಮೃತ ಮಹಿಳೆ. ರಾಣೆಬೆನ್ನೂರು ನಗರದಿಂದ ಕಮದೋಡ ಗ್ರಾಮಕ್ಕೆ ಮಹಿಳೆ ಆಟೋದಲ್ಲಿ ಬಂದಿದ್ದಾರೆ. ಆಟೋ ಚಾಲಕ ಕಮದೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹೆದ್ದಾರಿ-4ರ ಸೇತುವೆ ಮೇಲೆ ಮಹಿಳೆಯನ್ನು ಇಳಿಸಿದ್ದಾರೆ. ಈ ನಡುವೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ ಎನ್ನಲಾಗ್ತಿದೆ.
ಈ ಸಂಬಂಧ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.