ರಾಣೆಬೆನ್ನೂರು:ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಗುಂಪು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.
ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ,ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳು - latest news of ranebennur
ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಗುಂಪು, ಇದು ನಮ್ಮ ಜಾಗವೆಂದು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.
![ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ,ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳು](https://etvbharatimages.akamaized.net/etvbharat/prod-images/768-512-4736427-thumbnail-3x2-ranebennur.jpg)
ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ....ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸದ ಕಿಡಿಗೇಡಿಗಳು
ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ....ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸದ ಕಿಡಿಗೇಡಿಗಳು
ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ. ಈ ನಡುವೆ ವ್ಯಕ್ತಿಯೋರ್ವ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಈ ವೇಳೆ ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.