ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಭಾರೀ ಮಳೆ: ನೀರಿನಿಂದ ತುಂಬಿದ ವಾಲ್ಮೀಕಿ ಭವನ!

ಭಾರಿ ಮಳೆಯಿಂದ ವಾಲ್ಮೀಕಿ ಭವನದ ಕೆಳಮಹಡಿಯಲ್ಲಿ ನೀರು ನಿಂತಿದ್ದು, ನಾಳೆ (ಭಾನುವಾರ) ಆಚರಿಸಬೇಕಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸಲಾಗಿದೆ.

valmiki-jayant-celebration

By

Published : Oct 12, 2019, 9:52 PM IST

ಹಾವೇರಿ:ಭಾರಿ ಮಳೆಯಿಂದ ವಾಲ್ಮೀಕಿ ಭವನದ ಕೆಳಮಹಡಿಯಲ್ಲಿ ನೀರು ನಿಂತಿದ್ದು, ನಾಳೆ (ಭಾನುವಾರ) ಆಚರಿಸಬೇಕಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸಲಾಗಿದೆ.

ಕಟ್ಟಡದ ಕೆಳಮಹಡಿಯಲ್ಲಿ 3 ಅಡಿಗಳಷ್ಟು ನೀರು ನಿಂತಿದ್ದು, ಇದಕ್ಕೆ ಗುತ್ತಿಗೆದಾರರ ಕಳಪೆ ಕಾಮಗಾರಿ ಕಾರಣ ಎಂದು ಆರೋಪಿಸಲಾಗಿದೆ.

₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವನ ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ. ಅವೈಜ್ಞಾನಿಕ ಕೆಲಸದಿಂದಾಗಿ ಒಳಗೆ ನೀರು ನಿಂತಿದೆ. ಸದ್ಯ ಕಟ್ಟಡದ ಸ್ಥಿತಿ ನೋಡಿದರೆ ಅಪಾಯದ ಹಂತದಲ್ಲಿದೆ ಎಂದು ಸಮಾಜದ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.

ವಾಲ್ಮೀಕಿ ಭವನದಲ್ಲಿ ನಿಂತ ನೀರು

ಜಿಲ್ಲಾಡಳಿತ ಈ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details