ರಾಣೆಬೆನ್ನೂರು (ಹಾವೇರಿ): ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಹಿನ್ನೆಲೆ ನವಜೋಡಿಯೊಂದು ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಕುಂಬಾರ ಓಣಿಯ ಷಣ್ಮುಖ ಸಾಲಿಮನಿ ಹಾಗೂ ಕಾವ್ಯ ಎಂಬ ನವಜೋಡಿ ಮದುವೆ ಮಂಟಪದಿಂದ ನೇರವಾಗಿ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಸಿ ನೆಡುವ ಮೂಲಕ ವಾಜಪೇಯಿ ಜನ್ಮ ದಿನಾಚರಣೆ ಮಾಡಿ ದಾಂಪತ್ಯ ಶುರು ಮಾಡಿದರು.