ಕರ್ನಾಟಕ

karnataka

ETV Bharat / state

'ಶಾ, ಬಿಎಸ್​ವೈ ಜೈಲಿಗೆ ಹೋಗಿಬಂದವರು.. ಡಿಕೆಶಿ ಬಗ್ಗೆ ಪ್ರಶ್ನಿಸುವ ನೈತಿಕತೆ ಅವರಿಗಿಲ್ಲ..' - ಹಾವೇರಿ ಅಮೀತ್ ಷಾ ಯಡಿಯೂರಪ್ಪ ವಿರುದ್ದ ವಿ ಎಸ್​ ಉಗ್ರಪ್ಪ ಹೇಳಿಕೆ

ಜೈಲಿಗೆ ಹೋಗಿ ಬಂದಿರೋ ಅಮಿತ್ ಶಾ ಈ ರಾಷ್ಟ್ರದ ಗೃಹ ಸಚಿವರು. ರಾಷ್ಟ್ರದ ಬಿಜೆಪಿ ಅಧ್ಯಕ್ಷರು. ಇನ್ನು, ಬಿಜೆಪಿ ಮುಗಿಸೋದೆ ನನ್ನ ಗುರಿ ಅಂದಿದ್ದ ಸಿಎಂ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದವರು. ಅಂಥವರಿಗೆ ಅಧಿಕಾರ ನೀಡಿರೋ ಬಿಜೆಪಿಗೆ ಡಿಕೆಶಿ ಬಗ್ಗೆ ಪ್ರಶ್ನಿಸೋ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಕಿಡಿಕಾರಿದ್ದಾರೆ.

ಬಿಜೆಪಿಗರ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಕಿಡಿ

By

Published : Oct 27, 2019, 5:52 PM IST

ಹಾವೇರಿ : ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಅವರ ಕುರಿತು ಪ್ರಶ್ನಿಸಲು ಬಿಜೆಪಿಯ ಮುಖಂಡರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದಿರೋ ಅಮೀತ್ ಶಾ ಈ ರಾಷ್ಟ್ರದ ಗೃಹ ಸಚಿವರು, ರಾಷ್ಟ್ರದ ಬಿಜೆಪಿ ಅಧ್ಯಕ್ಷರು. ಇನ್ನು, ಬಿಜೆಪಿ ಮುಗಿಸೋದೆ ನನ್ನ ಗುರಿ ಅಂದಿದ್ದ ಸಿಎಂ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದವರು. ಅಂಥವರಿಗೆ ಅಧಿಕಾರ ನೀಡಿರೋ ಬಿಜೆಪಿಗೆ ಡಿಕೆಶಿ ಬಗ್ಗೆ ಪ್ರಶ್ನಿಸೋ ನೈತಿಕತೆ ಇಲ್ಲ.

ಡಿಕೆಶಿ ಅವರಿಗೆ ಈಗಲೂ ಪಕ್ಷದ ಯಾವುದೇ ಜವಾಬ್ದಾರಿ ಕೊಟ್ರೂ ಅದನ್ನ ಸಮರ್ಥವಾಗಿ ನಿಭಾಯಿಸೋ ಶಕ್ತಿ ಅವರಲ್ಲಿದೆ. ಡಿಕೆಶಿಗೆ ಜವಾಬ್ದಾರಿ ನೀಡೋ ವಿಚಾರದಲ್ಲಿ ಮನಬಂದಂತೆ ಮಾತನಾಡ್ತಿರೋ ಬಿಜೆಪಿಗೆ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸ್ತಾರೆ ಎಂದು ವಿ ಎಸ್ ಉಗ್ರಪ್ಪ ಕಿಡಿಕಾರಿದರು.

ಬಿಜೆಪಿಗರ ವಿರುದ್ಧ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಕಿಡಿ..
ಸರ್ಕಾರ ಕೆಡವು ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಉಗ್ರಪ್ಪನವರು, ಸರ್ಕಾರ ಉಳಿಸೋದು, ಬೀಳಿಸೋದು ಯಾವುದೇ ಪಕ್ಷ ಅಥವಾ ಯಾವುದೇ ಮುಖಂಡರ ಕೈಯಲ್ಲಿ ಇಲ್ಲ. ಅದೆಲ್ಲ ಜನರ ಕೈಯಲ್ಲಿದೆ. ಹೀಗಾಗಿ ಹೇಳಿಕೆಗಳಿಗಾಗಿ ಹೇಳಿಕೆ ನೀಡೋದು ಯಾರಿಗೂ ಶೋಭೆ ತರೋದಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಯಾವಾಗ ತನ್ನ ಆಂತರಿಕ ಗೊಂದಲಗಳಿಂದ ಬೀಳುತ್ತೋ ಅದೂ ಗೊತ್ತಿಲ್ಲ. ಇರುವಷ್ಟು ದಿನ ಉತ್ತಮವಾಗಿ ಜನರ ಸೇವೆ ಮಾಡಿ. ಇಲ್ಲದಿದ್ರೆ ಅಧಿಕಾರ ಬಿಟ್ಟು ತೊಲಗಿ ಅಂತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

For All Latest Updates

TAGGED:

ABOUT THE AUTHOR

...view details