ರಾಣೆಬೆನ್ನೂರು: ತಾಲೂಕಿನಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಈಗ ಬಿಳಿ ರೋಗಕ್ಕೆ ತುತ್ತಾಗುತ್ತಿದೆ.
ಕೃಷಿ ಸಚಿವರ ತವರಲ್ಲೇ ಯೂರಿಯಾ ಕೊರತೆ: ಬಿಳಿರೋಗಕ್ಕೆ ತುತ್ತಾದ ಮೆಕ್ಕೆಜೋಳ
ರಾಣೆಬೆನ್ನೂರು ತಾಲೂಕಿನಲ್ಲಿ ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈಗ ಬೆಳೆ ಫಸಲಿಗೆ ಬರುವ ಸಮಯದಲ್ಲಿ ಯೂರಿಯಾ ಗೊಬ್ಬರದ ಕೊರತೆ ತಾಲೂಕಿನಲ್ಲಿ ಕಂಡು ಬಂದಿದೆ.
ಹೌದು ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಶೀತ ವಾತಾವರಣ ಹೆಚ್ಚಾಗಿದೆ. ಪರಿಣಾಮ ಮೆಕ್ಕೆಜೋಳ ಬಿಳಿ ರೋಗಕ್ಕೆ ತುತ್ತಾಗುತ್ತಿದೆ. ಇನ್ನು ತಾಲೂಕಿನಲ್ಲಿ ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈಗ ಬೆಳೆ ಫಸಲಿಗೆ ಬರುವ ಸಮಯದಲ್ಲಿ ಯೂರಿಯಾ ಗೊಬ್ಬರದ ಕೊರತೆ ಕಂಡು ಬಂದಿದೆ. ಇದರಿಂದ ರೈತರು ನಿತ್ಯ ಗೊಬ್ಬರದ ಅಂಗಡಿ ಮುಂದೆ ಹೋಗಿ ಗೊಬ್ಬರ ಇದೆಯಾ ಎಂದು ಕೇಳಿ ವಾಪಸ್ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಕೃಷಿ ಮಂತ್ರಿಯಾದ ಬಿ.ಸಿ.ಪಾಟೀಲ್ ಕೊರೊನಾ ಸೋಂಕು ತಗುಲಿದೆ ಕಾರಣ ಕೃಷಿ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡುತ್ತಿಲ್ಲ. ಮತ್ತೊಂದೆಡೆ ತಾಲೂಕಿನ ರೈತರು ಗೊಬ್ಬರದ ಅಭಾವ ಎದುರಿಸುತ್ತಿದ್ದು, ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಸ್ಥಳೀಯ ಶಾಸಕರೂ ರೈತರಿಗೆ ಯೂರಿಯಾ ಗೊಬ್ಬರ ಕೊಡಿಸುವುದಕ್ಕೆ ಮುಂದಾಗಿಲ್ಲ. ಇದರಿಂದ ಬೆಳೆದ ಬೆಳೆ ಫಸಲಿಲ್ಲದೇ ನಷ್ಟಕ್ಕೆ ಈಡಾಗುವ ಆತಂಕ ಎದುರಾಗಿದೆ.