ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವಾಸನ ಮತ್ತು ಸೋಮಾಪುರ ಗ್ರಾಮದ ಬಳಿ ಇರೋ ವರದಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಹಾವೇರಿಯ ವರದಾ ನದಿಯಲ್ಲಿ ಅಪರಿಚಿತ ಶವ ಪತ್ತೆ.. - ಹಾವೇರಿಯ ವರದಾ ನದಿ
ಹಾವೇರಿಯ ವರದಾ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ನೀರಿನ ಹರಿವು ಹೆಚ್ಚಾಗಿರುವುದರಿಂದ ಎಲ್ಲಿಂದಲೋ ತೇಲಿ ಬಂದಿರುವುದಾಗಿ ಶಂಕಿಸಲಾಗಿದೆ.

ಅಪರಿಚಿತ ಶವ ಪತ್ತೆ
ಅಂದಾಜು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವಾಗದ್ದು, ಇದನ್ನ ನೋಡಿದ ಗ್ರಾಮಸ್ಥರು ಆಡೂರು ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಇರೋದ್ರಿಂದ ಶವ ಬೇರೆ ಯಾವುದೋ ಕಡೆಯಿಂದ ತೇಲಿ ಬಂದಿರಬಹುದು ಅಂತಾ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ವರದಾ ನದಿಯಲ್ಲಿ ಅಪರಿಚಿತ ಶವ ಪತ್ತೆ..
ಸ್ಥಳಕ್ಕೆ ಆಗಮಿಸಿದ ಆಡೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.