ಹಾವೇರಿ : ಪಕ್ಷದ ಹಿರಿಯ ನಾಯಕರ ಮಾತು ಕೇಳಲೆ, ಪಕ್ಷದ ಕಾರ್ಯಕರ್ತರ ಮಾತು ಕೇಳಲೆ ಎಂಬ ತೋಳಲಾಟದಲ್ಲಿ ನಾನಿದ್ದೇನೆಂದು ಮಾಜಿ ಶಾಸಕ ಯು.ಬಿ ಬಣಕಾರ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಯಾರ ಮಾತು ಕೇಳಲೆಂಬ ತೊಳಲಾಟದಲ್ಲಿ ಯು.ಬಿ. ಬಣಕಾರ - latest U.B Banakara news
ಪಕ್ಷದ ಹಿರಿಯ ನಾಯಕರ ಮಾತು ಕೇಳಲೆ, ಪಕ್ಷದ ಕಾರ್ಯಕರ್ತರ ಮಾತು ಕೇಳಲೆ ಎಂಬ ತೋಳಲಾಟದಲ್ಲಿ ನಾನಿದ್ದೇನೆಂದು ಮಾಜಿ ಶಾಸಕ ಯು.ಬಿ ಬಣಕಾರ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಯು.ಬಿ ಬಣಕಾರ
ಹಾವೇರಿ ಜಿಲ್ಲೆಯ ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಬಣಕಾರ, ಈ ಸ್ಥಿತಿಯನ್ನ ನಾನು ನಾಜೂಕಿನಿಂದ ಎದುರಿಸಬೇಕಾಗಿದೆ ಎಂದು ತಿಳಿಸಿದರು. ಒಂದು ವೇಳೆ ಕಾರ್ಯಕರ್ತರ ಮನವೊಲಿಸಲು ಸಾಧ್ಯವಾಗದಿದ್ದರೆ ಅವರೇನಾದರೂ ಹಿಂಸೆಯ ಮಾರ್ಗ ಹಿಡಿಯುತ್ತಾರೋ ಎಂಬ ಭಯ ನನಗೆ ಕಾಡುತ್ತಿದೆ ಎಂದರು.
ಇದೇ ವೇಳೆ, ಬಿ.ಸಿ ಪಾಟೀಲ್‌ಗೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಟಿಕೆಟ್ ಬಿಟ್ಟು ಕೊಡಲು ತಮಗೇ ಪಕ್ಷ ಯಾವುದೇ ಆಮಿಷ ಒಡ್ಡಿಲ್ಲ ಎಂದು ತಿಳಿಸಿದರು. ಜೊತೆಗೆ ನನಗೆ ಆಮಿಷಕ್ಕಿಂತ ಕಾರ್ಯಕರ್ತರನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.