ರಾಣೆಬೆನ್ನೂರು: ತುಂಗಾಭದ್ರ ನದಿಯಲ್ಲಿ ಮರಳು ತುಂಬಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಶವಗಳು ಸೋಮಲಾಪುರ ಗ್ರಾಮದಲ್ಲಿ ಪತ್ತೆಯಾಗಿವೆ.
ರಾಣೆಬೆನ್ನೂರು: ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ - Two youth dead body found in Tungabhadra River
ಮೂರು ದಿನಗಳ ಹಿಂದೆ ರಾಣೆಬೆನ್ನೂರು ಬಳಿಯ ತುಂಗಾಭದ್ರ ನದಿಯಲ್ಲಿ ಮರಳು ತುಂಬಲು ಹೋಗಿ ಎತ್ತಿನ ಗಾಡಿ ಸಮೇತ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹಗಳು ಇಂದು ಪತ್ತೆಯಾಗಿವೆ.
ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ
ತಾಲೂಕಿನ ಅರೇಮಲ್ಲಾಪುರ ಗ್ರಾಮದ ಜಗದೀಶ ಐರಣಿ(25) ಹಾಗೂ ಬೆಟ್ಟಪ್ಪ ಮಿಳ್ಳಿ(23) ಮೃತ ದುರ್ದೈವಿಗಳು. ಇವರು ಕೋಣನತಂಬಗಿ ಗ್ರಾಮದಲ್ಲಿ ಮರಳು ತುಂಬಲು ಹೋದಾಗ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಎತ್ತುಗಳ ಜತೆಗೆ ಕೊಚ್ಚಿ ಹೋಗಿದ್ದರು.
ಘಟನೆ ನಡೆದು ಮೂರು ದಿನಗಳ ನಂತರ ಶವಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.