ಕರ್ನಾಟಕ

karnataka

ETV Bharat / state

ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು..! - ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು

ನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ, ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆದಿದೆ.

Two young women drowned in river
ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು

By

Published : Aug 1, 2020, 9:57 PM IST

ರಾಣೆಬೆನ್ನೂರು (ಹಾವೇರಿ): ನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಹಿರೆಕೇರೂರು ತಾಲೂಕಿನ ಅಬಲೂರು ಗ್ರಾಮದ ಕೀರ್ತಿ ನಿಜಲಿಂಗಪ್ಪ ಇಂಗಳಗೊಂದಿ(17) ಮತ್ತು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಅಭಿಲಾಷ ಚಂದ್ರಪ್ಪ ಹಲಗೇರಿ (19) ಮೃತ ದುರ್ದೈವಿಗಳಾಗಿದ್ದಾರೆ.

ನದಿಯಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು

ಇಬ್ಬರು ಯುವತಿಯರು ಹಿರೇಬಿದರಿ ಗ್ರಾಮದ ಸೋದರ ಸಂಬಂಧಿಗಳ ಮನೆಗೆ ಹಬ್ಬಕ್ಕೆ ಬಂದಿದ್ದಾರೆ. ಇಂದು ತಮ್ಮ ಮಾವನ ಜತೆ ನದಿಗೆ ಹೋದ ಸಮಯದಲ್ಲಿ ಆಟವಾಡುತ್ತಾ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ. ಈ ಸಮಯದಲ್ಲಿ ಸ್ಥಳೀಯರು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇಬ್ಬರೂ ಯುವತಿಯರು ನೀರಲ್ಲಿ ಮುಳುಗಿದ್ದಾರೆ.‌

ಸದ್ಯ ಕೀರ್ತಿ ಎಂಬ ಯುವತಿ‌ಯ ಶವ ಪತ್ತೆಯಾಗಿದ್ದು, ಅಭಿಲಾಷಳ ಶವಕ್ಕಾಗಿ ಅಗ್ನಿಶಾಮಕ ದಳ ಹುಡುಕಾಟ ನಡೆಸಿದೆ.

For All Latest Updates

ABOUT THE AUTHOR

...view details