ಕರ್ನಾಟಕ

karnataka

ETV Bharat / state

ವರದಾ ನದಿಯಲ್ಲಿ ಅನಾಹುತ: ಎತ್ತಿನ ಮೈತೊಳೆಯಲು ಹೋದ ಇಬ್ಬರು ನೀರುಪಾಲು - ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರು ಪಾಲು ಸುದ್ದಿ

ಎತ್ತಿನ ಮೈತೊಳೆಯಲು ಹೋಗಿದ್ದ 16 ವರ್ಷದ ಬಾಲಕ ಪ್ರಶಾಂತ ನೀರಿನಲ್ಲಿ ಮುಳುಗುವುದನ್ನು ನೋಡಿದ ಪರಮೇಶಪ್ಪ ಆತನನ್ನು ಬದುಕಿಸಲು ಹೋಗಿ ತಾನೂ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ನಡೆದಿದೆ.

ಮೃತ ದುರ್ದೈವಿಗಳಾದ ಪರಮೇಶಪ್ಪ ಹಾಗೂ ಪ್ರಶಾಂತ

By

Published : Oct 24, 2019, 11:22 AM IST

ಹಾವೇರಿ:ಎತ್ತಿನ ಮೈತೊಳೆಯಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗೆನೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (16) ಎಂದು ಗುರುತಿಸಲಾಗಿದೆ.

ವರದಾ ನದಿಯಲ್ಲಿ ಎತ್ತಿನ ಮೈತೊಳೆಯಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಎತ್ತಿನ ಮೈತೊಳೆಯಲು ಹೋದ ಇಬ್ಬರು ನೀರು ಪಾಲಾಗಿದ್ದಾರೆ.

ಸಂಬಂಧಿಕರ ಜೊತೆ ನದಿಗೆ ತೆರಳಿದ್ದ ಪ್ರಶಾಂತ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಪ್ರಶಾಂತ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು ಪರಮೇಶಪ್ಪ ಆತನ ರಕ್ಷಣೆಗೆ ನೀರಿಗಿಳಿದಿದ್ದಾರೆ. ಪರಿಣಾಮ ಅವರೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

ಪರಮೇಶಪ್ಪ ಮತ್ತು ಪ್ರಶಾಂತ ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details