ಹಾವೇರಿ: ವರದಾ ನದಿಯಲ್ಲಿ ಮುಳುಗಿ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ಬಳಿ ನಡೆದಿದೆ.
ವರದಾ ನದಿಯ ಬ್ಯಾರೇಜ್ನಲ್ಲಿ ಮುಳುಗಿ ಎತ್ತುಗಳು ಸಾವು - ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್
ಜಿಲ್ಲೆಯ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ಬಳಿ ನದಿಯಲ್ಲಿ ಮುಳುಗಿ ಎರಡು ಎತ್ತುಗಳು ಸಾವನ್ನಪ್ಪಿವೆ.
ಎತ್ತುಗಳು ಸಾವುವರದಾ ನದಿ
ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ಎತ್ತಿನ ಮೈ ತೊಳೆಯಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇವು ಮಹಾಲಿಂಗಪ್ಪ ಮಳಿಯಣ್ಣನವರ ಎಂಬ ರೈತನಿಗೆ ಸೇರಿದ ಎತ್ತುಗಳಾಗಿದ್ದವು.
ಸುಮಾರು 80 ಸಾವಿರ ರೂ. ಮೌಲ್ಯದ ಎತ್ತುಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಬ್ರಿಡ್ಜ್ ಕಂ ಬ್ಯಾರೇಜ್ಗೆ ಎತ್ತುಗಳಿಗೆ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಅವು ನೀರಲ್ಲಿ ಮುಳುಗಿ ಸಾವನ್ನಪ್ಪಿವೆ ಎನ್ನಲಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.