ಹಾವೇರಿ: ಕೊರೊನಾ ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಹಾವೇರಿ ಕೋವಿಡ್ ಆಸ್ಪತ್ರೆ ಶುಕ್ರವಾರ ಕೋವಿಡ್ ಮುಕ್ತ ಆಸ್ಪತ್ರೆಯಾಗಿತ್ತು. ಆದರೆ ಕೋವಿಡ್ ಆಸ್ಪತ್ರೆಗೆ ಶನಿವಾರ ಇಬ್ಬರು ಸೋಂಕಿತರು ಸೇರ್ಪಡೆಯಾಗಿದ್ದಾರೆ.
ಕೊರೊನಾ ಮುಕ್ತವಾಗಿದ್ದ ಹಾವೇರಿಯಲ್ಲಿ ಇಂದು ಮತ್ತಿಬ್ಬರಿಗೆ ಸೋಂಕು! - ಇಂದು ಇಬ್ಬರಿಗೆ ಕೋವಿಡ್ ದೃಢ
ಹಾವೇರಿ ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೋವಿಡ್-19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
![ಕೊರೊನಾ ಮುಕ್ತವಾಗಿದ್ದ ಹಾವೇರಿಯಲ್ಲಿ ಇಂದು ಮತ್ತಿಬ್ಬರಿಗೆ ಸೋಂಕು! two more people covid-19 test positive in haveri](https://etvbharatimages.akamaized.net/etvbharat/prod-images/768-512-7604567-thumbnail-3x2-hvr.jpg)
ಮಹಾರಾಷ್ಟ್ರದಿಂದ ಹಾವೇರಿಗೆ ಆಗಮಿಸಿದ್ದ ಓರ್ವ ಯುವಕ ಮತ್ತು ಓರ್ವ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಇಬ್ಬರು ಮಹಾರಾಷ್ಟ್ರದಿಂದ ರೈಲಿನಲ್ಲಿ ಗದಗಕ್ಕೆ ಬಂದು ಅಲ್ಲಿಂದ ಬಸ್ ಮೂಲಕ ಹಾವೇರಿಗೆ ಬಂದಿದ್ದರು ಎನ್ನಲಾಗಿದೆ.
ಇಬ್ಬರನ್ನೂ ಈ ಮೊದಲೇ ಹಾವೇರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 23ಕ್ಕೆ ಏರಿದ್ದು, 21 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹೊಸದಾಗಿ ಆಸ್ಪತ್ರೆಗೆ ಇಬ್ಬರು ಸೇರ್ಪಡೆಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.