ಕರ್ನಾಟಕ

karnataka

ETV Bharat / state

ಹಾನಗಲ್ ಬಳಿ ಬೈಕ್​ಗಳಿಗೆ ಕಾರು ಡಿಕ್ಕಿ.. ಸ್ಥಳದಲ್ಲೇ ಇಬ್ಬರ ದುರ್ಮರಣ - ಹಾನಗಲ್ ತಾಲೂಕಿನ ಆಡೂರು ಗ್ರಾಮದ ಬಳಿ ಕಾರು ಅಪಘಾತ

ಎರಡು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ.

two-killed-in-road-accident-in-haveri
ಹಾನಗಲ್ ಬಳಿ ಬೈಕ್​ಗಳಿಗೆ ಕಾರು ಡಿಕ್ಕಿ

By

Published : May 7, 2022, 10:58 PM IST

ಹಾವೇರಿ:ಎರಡು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಬಳಿ ನಡೆದಿದೆ. ಮೃತರನ್ನು ಗಣೇಶ ಲಮಾಣಿ (35) ಮತ್ತು ರಮೇಶ ಲಮಾಣಿ (40) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತೋರ್ವನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ಟೈರ್ ಸ್ಫೋಟಗೊಂಡು, ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ತರಕಾರಿ ವ್ಯಾಪಾರದಲ್ಲಿನ ಲಾಭವೇ ಮುಳುವಾಯ್ತಾ?.. ಕ್ಯಾಪ್ಸಿಕಂ ರವಿ ಕೊಲೆ ಆರೋಪಿಗಳ ಬಂಧನ

ABOUT THE AUTHOR

...view details