ಕರ್ನಾಟಕ

karnataka

ETV Bharat / state

ಮುಂಗಾರು ಪೂರ್ವ ಮಳೆ: ಹಾವೇರಿಯಲ್ಲಿ ಸಿಡಿಲಬ್ಬರ, ಇಬ್ಬರಿಗೆ ಗಾಯ, 25 ಕುರಿಗಳು ಸಾವು - ಡಿಲಿನ ಜೊತೆ ಧಾರಾಕಾರ ಮಳೆ

ಹಾವೇರಿ ಜಿಲ್ಲೆಯಲ್ಲಿ ಒಂದೆಡೆ ಸಿಡಿಲಿಗೆ ಇಬ್ಬರು ಗಾಯಗೊಂಡರೆ, ಮತ್ತೊಂದೆಡೆ 25 ಕುರಿಗಳು ಸಾವನ್ನಪ್ಪಿವೆ.

25 sheep killed in Haveri lightning strike  Rain in Haveri  Haveri rain loss  ಹಾವೇರಿಯಲ್ಲಿ ಸಿಡಿಲಿಗೆ ಇಬ್ಬರಿಗೆ ಗಾಯ  25 ಕುರಿಗಳು ಸಾವು  ಒಂದೆಡೆ ಸಿಡಿಲಿಗೆ ಇಬ್ಬರು ಗಾಯ  ಮತ್ತೊಂದೆಡೆ 25 ಕುರಿಗಳು ಸಾವನ್ನಪ್ಪಿರುವುದು ವರದಿ  ರಾಜ್ಯದ ಕೆಲ ಭಾಗಗಳಲ್ಲಿ ಪೂರ್ವ ಮುಂಗಾರು ಆರ್ಭಟ  ಡಿಲಿನ ಜೊತೆ ಧಾರಾಕಾರ ಮಳೆ  ಹಾವೇರಿ ಜಿಲ್ಲೆಯ ವಿವಿಧಡೆ ಬುಧವಾರ ಸಂಜೆ ಮಳೆ
25 sheep killed in Haveri lightning strike Rain in Haveri Haveri rain loss ಹಾವೇರಿಯಲ್ಲಿ ಸಿಡಿಲಿಗೆ ಇಬ್ಬರಿಗೆ ಗಾಯ 25 ಕುರಿಗಳು ಸಾವು ಒಂದೆಡೆ ಸಿಡಿಲಿಗೆ ಇಬ್ಬರು ಗಾಯ ಮತ್ತೊಂದೆಡೆ 25 ಕುರಿಗಳು ಸಾವನ್ನಪ್ಪಿರುವುದು ವರದಿ ರಾಜ್ಯದ ಕೆಲ ಭಾಗಗಳಲ್ಲಿ ಪೂರ್ವ ಮುಂಗಾರು ಆರ್ಭಟ ಡಿಲಿನ ಜೊತೆ ಧಾರಾಕಾರ ಮಳೆ ಹಾವೇರಿ ಜಿಲ್ಲೆಯ ವಿವಿಧಡೆ ಬುಧವಾರ ಸಂಜೆ ಮಳೆ

By

Published : Jun 1, 2023, 8:42 AM IST

ಹಾವೇರಿ: ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟ ಜೋರಾಗಿದೆ. ಅಲ್ಲಲ್ಲಿ ಸಿಡಿಲಿನ ಜೊತೆ ಧಾರಾಕಾರ ಮಳೆ ಸುರಿಯುತ್ತಿದೆ. ಹಾವೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಮಳೆರಾಯ ಆರ್ಭಟಿಸಿದ್ದು, ಕೆಲವು ದುರ್ಘಟನೆಗಳು ಸಂಭವಿಸಿವೆ.

ಅಜ್ಜಿ-ಮೊಮ್ಮಗನಿಗೆ ಗಾಯ: ಹಾನಗಲ್‌ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡರು. ಮನೆಯಲ್ಲಿದ್ದ ಅಜ್ಜಿ ಮತ್ತು ಮೊಮ್ಮಗನಿಗೆ ಸಿಡಿಲು ಬಡಿಯಿತು. 60 ವರ್ಷದ ರೇಣುಕವ್ವ ಕರಡಿ ಮತ್ತು 10 ವರ್ಷದ ಮಾಲತೇಶ ಕರಡಿ ಎಂಬ ಬಾಲಕ ಗಾಯಗೊಂಡಿದ್ದಾರೆ‌. ಸ್ಥಳೀಯರು ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

25 ಕುರಿಗಳು ಸಾವು: ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ಎಂಬ ಗ್ರಾಮದಲ್ಲಿ ಸಿಡಿಲು ಹೊಡೆದು 25 ಕುರಿಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಕುರಿಗಳು ಸಿದ್ದಪ್ಪ ಕತ್ತಿ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಳೆ ಆರ್ಭಟಕ್ಕೆ ಕೆಆರ್​ಎಸ್​ ಬೃಂದಾವನದಲ್ಲಿ ಧರೆಗುರುಳಿದ ಮರಗಳು: ವಿಡಿಯೋ

ಬೆಳಗಾವಿಯಲ್ಲಿ ಇಬ್ಬರು ಸಾವು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆಗಮನದ ಮೊದಲೇ ಗುಡುಗು, ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಮಂಗಳವಾರ ಸಂಜೆ ಸುರಿದ ಜೋರು ಮಳೆಗೆ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆಯಿತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಪ್ರತ್ಯೇಕ ಗ್ರಾಮದಲ್ಲಿ ಸಿಡಿಲು ಬಡಿದು ಒಬ್ಬ ಯುವಕ, ಓರ್ವ ಮಹಿಳೆ ಮೃತಪಟ್ಟಿದ್ದರು.

ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರಿ ದಡ್ಡಿ ನಿವಾಸಿ ಅಮೂಲ್ ಜಯಸಿಂಗ ಕಾನಡೆ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತೋಟದಲ್ಲಿ ಆಡುಗಳನ್ನು ಮೇಯಿಸಲು ಹೋಗಿದ್ದ ಸಮಯದಲ್ಲಿ ಯುವಕನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ, ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದಲ್ಲಿ ವಿಠ್ಠಬಾಯಿ ಮಹದೇವ ಕಾಮಕರ (50) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಯುಡಿ ಗ್ರಾಮದ ನಿವಾಸಿ. ಅಥಣಿ ತಾಲೂಕಿನ ದೇಸಾರಹಟ್ಟಿ ಗ್ರಾಮದ ಮಗಳ ಮನೆಗೆ ಬಂದಾಗ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲಾದ್ಯಂತ ಜಡಿ ಮಳೆ:ಸೋಮವಾರ ಸುರಿದ ಗಾಳಿಸಹಿತ ಭಾರಿ ಮಳೆಗೆ ಜಿಲ್ಲಾದ್ಯಂತ ಅಪಾರ ಹಾನಿ ಉಂಟಾಗಿದ್ದು, ಸಾವು ನೋವು ಸಂಭವಿಸಿದೆ. ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಶ್ರಯ ಬಡಾವಣೆಯ ನಿವಾಸಿ ಲಕ್ಷ್ಮೀ ಬಾಯಿ (28) ಎಂಬವರು ಕುರಿ ಮರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಲವಾರು ಕಡೆ ಗಾಳಿ ಮಳೆಯಿಂದ ಮರಗಳು ಧರೆಗುರುಳಿದ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಶಿವಮೊಗ್ಗದ ಶಾಸಕರಾದ ಚೆನ್ನಬಸಪ್ಪ ಸಿಡಿಲು ಬಡಿದು ಸಾವನ್ನಪ್ಪಿದ ಲಕ್ಷ್ಮೀ ಬಾಯಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಬೊಮ್ಮನಕಟ್ಟೆಯಲ್ಲಿ ಪ್ರಕಾಶ್ ಎನ್ನುವವರು ಮನೆಯ ಮೇಲ್ಛಾವಣಿ ಕುಸಿದು ಸಾಕಷ್ಟು ಹಾನಿಯಾಗಿದ್ದು, ಅಲ್ಲಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಸೂಚನೆ: ಮುಂಜಾಗ್ರತಾ ಕ್ರಮ ಕೈಗೊಂಡ ಜಿಲ್ಲಾಡಳಿತ

ABOUT THE AUTHOR

...view details