ಹಾವೇರಿ:ಜಿಲ್ಲೆಯಲ್ಲಿ ಕೊರೊನಾದ ಆರ್ಭಟ ಹೆಚ್ಚಾಗುತ್ತಲೇ ಸಾಗುತ್ತಿದ್ದು, ಇದೀಗ ಮತ್ತೆ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಹಾವೇರಿಯಲ್ಲಿ ಮತ್ತೆ ಇಬ್ಬರಿಗೆ ಪತ್ತೆಯಾದ ಕೊರೊನಾ...ಸೋಂಕಿತರು ವಾಸವಿದ್ದ ನಗರ ಸೀಲ್ಡೌನ್... - ಹಾವೇರಿಯಲ್ಲಿ ಹೆಚ್ಚಾದ ಕೊರೊನಾ
ಹಾವೇರಿಯಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 43 ಕ್ಕೇರಿದೆ. ಅದರಲ್ಲಿ 22 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, 21 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿಯಲ್ಲಿ ಮತ್ತೆ ಇಬ್ಬರಿಗೆ ಪತ್ತೆಯಾದ ಕೊರೊನಾ
ಜಿಲ್ಲೆಯ ಶಿಗ್ಗಾವಿಯ ಪಿಗ್ಮಿ ಕಲೆಕ್ಟರ್ ಮತ್ತು ರಾಣೆಬೆನ್ನೂರಿನಲ್ಲಿ ಬಟ್ಟೆ ವ್ಯಾಪಾರಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪರಿಣಾಮ ಪಿಗ್ಮಿ ಕಲೆಕ್ಟರ್ ವಾಸವಾಗಿದ್ದ ಶಿಗ್ಗಾವಿಯ ಜಯನಗರವನ್ನ ಸೀಲ್ಡೌನ್ ಮಾಡಲಾಗಿದೆ.
ರಾಣೆಬೆನ್ನೂರಿನಲ್ಲಿ ಬಟ್ಟೆ ವ್ಯಾಪಾರಿ ವಾಸವಿದ್ದ ಮನೆ ಓಣಿ ಮತ್ತು ಅಂಗಡಿಯನ್ನೂ ಸೀಲ್ಡೌನ್ ಮಾಡಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43 ಕ್ಕೇರಿದೆ. ಅದರಲ್ಲಿ 22 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, 21 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.