ಹಾವೇರಿ: ನದಿಗೆ ಸ್ನಾನ ಮಾಡಲು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ತಾಲೂಕಿನ ನಾಗನೂರು ಗ್ರಾಮದ ಬಳಿಯಿರುವ ವರದಾ ನದಿಯಲ್ಲಿ ಈ ಘಟನೆ ನಡೆದಿದೆ.
ಮಹೇಶ ಮುರಡಣ್ಣನವರ (10) ಮತ್ತು ವೀರೇಶ ಅಕ್ಕಿವಳ್ಳಿ (10) ಮೃತ ಬಾಲಕರು. ಯೋಗೇಶ (7) ಅಸ್ವಸ್ಥಗೊಂಡಿರುವ ಬಾಲಕ. ಹೋಳಿ ಪ್ರಯುಕ್ತ ಬಣ್ಣ ಎರಚಿಕೊಂಡು ನಂತರ ನದಿಗೆ ಸ್ನಾನಕ್ಕೆಂದು ಈ ಮೂವರು ಬಾಲಕರು ತೆರಳಿದ್ದರು ಎನ್ನಲಾಗ್ತಿದೆ. ತೀವ್ರ ಅಸ್ವಸ್ಥಗೊಂಡಿರುವ ಯೋಗೇಶನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.