ಹಾವೇರಿ: ಇದೇ 13 ರಂದು ಹಾವೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರ ನಾಗನೂರು ಕ್ರಾಸ್ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನ ಹಾವೇರಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿತರನ್ನ ಬಂಕಾಪುರ ಗ್ರಾಮದ ಸೋಮಣ್ಣ ಮತ್ತು ರಾಣೆಬೆನ್ನೂರು ನಗರದ ಚಂದ್ರು ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಾದೇವಪ್ಪನಿಗೆ 10 ಎಕರೆ ಜಮೀನಿದ್ದು, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಆರೋಪಿತರಿಗೆ ನಿಧಿ ತೋರಿಸುವ ಆಮಿಷ ತೋರಿಸುತ್ತಿದ್ದ ಎನ್ನಲಾಗಿದೆ.
ಕೈಯಲ್ಲಿ ಸದಾ ಸುತ್ತಿಗೆ ಹಿಡಿದು ಓಡಾಡುತ್ತಿದ್ದ ಮಹಾದೇವಪ್ಪ ಹಲವರಿಗೆ ನಿಧಿ ಆಸೆ ಹಚ್ಚಿಸುತ್ತಿದ್ದ ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಆರೋಪಿಗಳಾದ ಸೋಮಣ್ಣ ಮತ್ತು ಚಂದ್ರು ಮತ್ತು ಮಹದೇವಪ್ಪ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ಹೋಗಿ ಸೋಮಣ್ಣ ಮತ್ತು ಚಂದ್ರು ಮಹದೇವಪ್ಪ ಕೊಲೆ ಮಾಡಿದ್ದಾರೆ ಎಂದು ಹಾವೇರಿ ಎಸ್ಪಿ ಹನುಮಂತರಾಯ್ ತಿಳಿಸಿದ್ದಾರೆ.
ಎಸ್ಪಿ ಹನುಮಂತರಾಯ ಅವರು ಮಾತನಾಡಿದರು ಪೊಲೀಸ್ ಸಿಬ್ಬಂದಿಗೆ ಅಭಿನಂದನೆ: ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ಅಲ್ಲದೇ, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಓದಿ:ಹಾವೇರಿ: ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ