ಹಾವೇರಿ: ಕರ್ನಾಟಕ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿತೀರದಲ್ಲಿ ತುಂಗಾರತಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಚೊಚ್ಚಲ ತುಂಗಾರತಿ ಇದಾಗಿದ್ದು ಮಾ.04 ರಂದು ಅದ್ಧೂರಿಯಾಗಿ ನಡೆಯಲಿದೆ.
ಉತ್ತರ ಭಾರತದ ಕಾಶಿ, ಹರಿದ್ವಾರ ಹಾಗೂ ಋಷಿಕೇಶದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿಯೇ ತುಂಗಭದ್ರಾ ನದಿಗೆ ತುಂಗಾರತಿ ನಡೆಯಲಿದೆ. ಈ ಅಪರೂಪದ ಸಂದರ್ಭಕ್ಕೆ ನಾಡಿನ ವಿವಿಧ ಮಠಾಧೀಶರುಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಲಿದ್ದಾರೆ.