ಕರ್ನಾಟಕ

karnataka

ETV Bharat / state

ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸ್ಥಳೀಯರು - Haveri city limits

ಹಾವೇರಿಯ ರೈಲ್ವೆ ನಿಲ್ದಾಣದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

treatment-for-consciousness-old-age-lady
ಅನ್ನಪೂರ್ಣ ಗಾಯಗೊಂಡು ಅಸ್ವಸ್ಥಗೊಂಡಿರುವ ವೃದ್ದೆ

By

Published : Dec 19, 2019, 11:10 PM IST

ಹಾವೇರಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಅನ್ನಪೂರ್ಣ ಗಾಯಗೊಂಡು ಅಸ್ವಸ್ಥಗೊಂಡವರು. ಅಬ್ದುಲ್ ಖಾದರ್ ಎಂಬವರು ಅನ್ನಪೂರ್ಣರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.

ಅನ್ನಪೂರ್ಣ ರೈಲಿನಲ್ಲಿ ಪಯಣಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಬಳಿಕ ಪ್ರಜ್ಞೆ ತಪ್ಪಿರುವುದು ಬೆಳಕಿಗೆ ಬಂದಿದೆ.

ವೃದ್ಧೆಗೆ ಚಿಕಿತ್ಸೆ ಕೊಡಿಸಿದ ಅಬ್ದಲ್​ ಖಾದರ್​​

ಅನ್ನಪೂರ್ಣ ಬಳಿಯಿದ್ದ ಬಂಗಾರದ ವಸ್ತುಗಳನ್ನು ಕಂಡ ಪೊಲೀಸರು, ಅವುಗಳನ್ನ ಸ್ಥಳೀಯರಿಗೆ ಒಪ್ಪಿಸಿದ್ದಾರೆ. ಮೈಮೇಲೆ ಬಂಗಾರವಿದ್ದರೇ ಕಳ್ಳತನ ಆಗಬಹುದು ಎಂಬ ಮುಂಜಾಗೃತೆಯಿಂದ ಅಬ್ದುಲ್ ಖಾದರ್‌ಗೆ ಒಪ್ಪಿಸಿದ್ದಾರೆ. ಹಾವೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಹಿಳೆಗೆ ತನ್ನ ಹೆಸರು ಬಿಟ್ಟು ಯಾವುದು ನೆನಪಿಗೆ ಬರುತ್ತಿಲ್ಲ. ಅನ್ನಪೂರ್ಣ ಅವರನ್ನ ಸಂಬಂಧಿಕರು ಗುರುತಿಸಿದರೇ ಅಥವಾ ಮಹಿಳೆಗೆ ಪ್ರಜ್ಞೆ ಬಂದರೆ ಮನೆ ಸೇರಿಸುವ ಇಂಗಿತವನ್ನು ಅಬ್ದುಲ್ ಖಾದರ್ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details