ಕರ್ನಾಟಕ

karnataka

ಸಾರಿಗೆ ನೌಕರರ ಮುಷ್ಕರ: ಹಾವೇರಿಯಲ್ಲಿ ಮತ್ತೆ 28 ಮಂದಿ ವರ್ಗಾವಣೆ

By

Published : Apr 11, 2021, 11:49 AM IST

6ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಹಾವೇರಿಯಲ್ಲಿ ಮತ್ತೆ 28 ಮಂದಿ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಾವೇರಿ
ಹಾವೇರಿ

ಹಾವೇರಿ: ಕೆಎಸ್​​ಆರ್​​ಟಿಸಿ ನೌಕರರ ಮುಷ್ಕರ ಹಿನ್ನೆಲೆ ಜಿಲ್ಲೆಯಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಮತ್ತೆ 28 ಜನ ಸಾರಿಗೆ ನೌಕರರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಹಾವೇರಿ ಕೆಎಸ್​​ಆರ್​​ಟಿಸಿ ಬಸ್​ ನಿಲ್ದಾಣ

6ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಬೇಸತ್ತಿರುವ ಅಧಿಕಾರಿಗಳು ಮುಷ್ಕರದ ಮುಂದಾಳತ್ವ ವಹಿಸಿದ ನೌಕರರನ್ನು ವರ್ಗಾವಣೆಗೊಳಿಸಿ ಅವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ವರ್ಗಾವಣೆಗೊಂಡ ನೌಕರರ ಪಟ್ಟಿ

ಜಿಲ್ಲೆಯ 28 ಜನ ಚಾಲಕ ಹಾಗೂ ನಿರ್ವಾಹಕರನ್ನು ಹಾವೇರಿ ಜಿಲ್ಲೆಯಿಂದ ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

ಶನಿವಾರ 17 ಜನ ಸಿಬ್ಬಂದಿಯನ್ನು ಇದೇ ಜಿಲ್ಲೆಯೊಳಗೇ ವರ್ಗಾವಣೆ ಮಾಡಲಾಗಿತ್ತು. ಇದೀಗ 28 ಜನ ಸಿಬ್ಬಂದಿಯನ್ನು ಬೇರೆ ಬೇರೆ ಜಿಲ್ಲೆಗಳಿಗೆ ಎತ್ತಂಗಡಿ ಮಾಡಲಾಗಿದೆ.

ABOUT THE AUTHOR

...view details