ಹಾನಗಲ್: ತಾಲೂಕಿನ 42 ಗ್ರಾಮ ಪಂಚಾಯತ್‌ಗಳಲ್ಲಿ ಯುವ ಪ್ರತಿಭೆಗಳನ್ನ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಲಾಗಿದೆ ಎಂದು ಜನಹಿತ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ ಕೆ ಮೋಹನಕುಮಾರ್ ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಯುವ ಪ್ರತಿಭೆಗಳಿಗೆ ತರಬೇತಿ.. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪ್ರತಿಭಾನ್ವಿತ, ಪದವೀಧರ ಯುವ ಪ್ರತಿಭೆಗಳನ್ನ ಸ್ಪರ್ಧಿಸಲು ತರಬೇತಿಯೊಂದಿಗೆ ಪ್ರೇರೇಪಿಸಲಾಗುವುದು ಮತ್ತು ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ಜನಹಿತ ರಕ್ಷಣಾ ವೇದಿಕೆಯಿಂದ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಶೇ.33ರಷ್ಟು ಮಹಿಳೆಯರು ಶೇ.33ರಷ್ಟು ಯುವಕರು, ಶೇ.34ರಷ್ಟು ನಮ್ಮ ಟ್ರಸ್ಟ್‌ಗೆ ಮಾರ್ಗದರ್ಶನ ಮತ್ತು ಗ್ರಾಮಗಳಲ್ಲಿ ಗೌರವಾನ್ವಿತ ಹಿರಿಯರಿಗೆ ಮೀಸಲಿಡಲಾಗಿದೆ ಎಂದರು.
ಈಗಾಗಲೇ ನಮ್ಮ ಸಂಘಟನೆ ಹಲವು ಸಾಮಾಜಿಕ ಕಾರ್ಯಗಳನ್ನ ಮಾಡುವುದರ ಮೂಲಕ ಜನರ ಮನದಲ್ಲಿ ಮನೆ ಮಾಡಿದೆ. ಆದ್ದರಿಂದ ನಮ್ಮ ತಾಲೂಕನ್ನು ಇಡೀ ದೇಶದಲ್ಲಿ ಮಾದರಿ ತಾಲೂಕನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಮನ್ನಡೆಯಲಾಗುತ್ತಿದೆ ಎಂದರು.