ರಾಣೆಬೆನ್ನೂರು/ಹಾವೇರಿ:ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರನಿಗೆ ದಂಡ ಹಾಕಿದ ಹಿನ್ನೆಲೆ ಪೊಲೀಸರ ಜತೆ ವಾಗ್ವಾದ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.
'ಊಟಕ್ಕೆ ದುಡ್ಡಿಲ್ಲ, ದಂಡ ಹೇಗ್ ಕಟ್ಲಿ ಸರ್': ಪೊಲೀಸರಲ್ಲಿ ಸವಾರನ ಮನವಿ - ರಾಣೆಬೆನ್ನೂರು ಟ್ರಾಫಿಕ್ ಪೊಲೀಸರ ವೈರಲ್ ವಿಡಿಯೋ
ಲಾಕ್ಡೌನ್ ಇದ್ರೂ ಸುಖಾಸುಮ್ಮನೆ ಓಡಾಡ್ತಿದ್ದ ಯುವಕರಿಗೆ ಪೊಲೀಸರು ದಂಡ ಹಾಕಿದ್ದಾರೆ. ಪೊಲೀಸರ ಜತೆ ವಾಗ್ವಾದಕ್ಕಿಳಿದ ಯುವಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ಪೋಲಿಸರು ಎಲ್ಲಾ ವಾಹನಗಳನ್ನು ನಿಷೇಧ ಮಾಡಿದ್ದಾರೆ. ಈ ನಡುವೆ ಹಲಗೇರಿ ವೃತ್ತದಲ್ಲಿ ಇಬ್ಬರು ಯುವಕರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಸಮಯದಲ್ಲಿ ಪೊಲೀಸರು ತಡೆದು 5 ಸಾವಿರ ದಂಡ ಹಾಕಿದ್ದಾರೆ. ಇದನ್ನು ಯುವಕರು ಪ್ರಶ್ನಿಸಿದಾಗ ಪೊಲೀಸರು-ಯುವಕರ ನಡುವೆ ಮಾತಿಗೆ ಮಾತು ಬೆಳೆದಿದೆ.
ಈ ಸಮಯದಲ್ಲಿ ಬೈಕ್ ಸವಾರ ನಮಗೆ ಊಟಕ್ಕೆ ದುಡ್ಡಿಲ್ಲ, ನಿಮಗೆ ಹೇಗೆ ದುಡ್ಡು ಕೊಡೋದು ಎಂದು ಪ್ರಶ್ನೆ ಮಾಡಿದ್ದಾನೆ. ಇದೇ ವೇಳೆ ವಾಹನ ಸವಾರ ಪೊಲೀಸರ ಜತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.