ರಾಣೆಬೆನ್ನೂರು: ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ವರ್ಗಾವಣೆಗೆ ಒತ್ತಾಯಿಸಿ ಸದಸ್ಯರು ಪ್ರತಿಭಟಿಸಿದ ಬೆನ್ನಲ್ಲೇ ಇಂದು ವರ್ತಕರು ಸಹ ಖರೀದಿ ಸ್ಥಗಿತಗೊಳಿಸಿ ಕಾರ್ಯದರ್ಶಿ ಮೇಲೆ ಮುಗಿಬಿದ್ದಿದ್ದಾರೆ.
ಎಪಿಎಂಸಿ ಕಾರ್ಯದರ್ಶಿ ಮೇಲೆ ಮುಗಿಬಿದ್ದ ವರ್ತಕರು - ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ
ರಾಣೆಬೆನ್ನೂರು ಎಪಿಎಂಸಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಿ.ಸತೀಶಕುಮಾರ ಅವರು ಮಾರುಕಟ್ಟೆ ಮತ್ತು ಆಡಳಿತ ವಿಷಯದಲ್ಲಿ ಸದಸ್ಯರನ್ನು ಮತ್ತು ವರ್ತಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕಂಡು ಬಂದಿತ್ತು. ಇದರಿಂದ ಎಪಿಎಂಸಿ ಸದಸ್ಯರು ಅವರ ವಿರುದ್ಧ ಅಹೋರಾತ್ರಿ ಧರಣಿ ಕೂತಿದ್ದಾರೆ.
ರಾಣೆಬೆನ್ನೂರು ಎಪಿಎಂಸಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಿ.ಸತೀಶಕುಮಾರ ಅವರು ಮಾರುಕಟ್ಟೆ ಮತ್ತು ಆಡಳಿತ ವಿಷಯದಲ್ಲಿ ಸದಸ್ಯರನ್ನು ಮತ್ತು ವರ್ತಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕಂಡು ಬಂದಿತ್ತು. ಇದರಿಂದ ಎಪಿಎಂಸಿ ಸದಸ್ಯರು ಅವರ ವಿರುದ್ಧ ಅಹೋರಾತ್ರಿ ಧರಣಿ ಕೂತಿದ್ದಾರೆ. ಇಂದು ಬೆಳಿಗ್ಗೆ ಎಪಿಎಂಸಿಯಲ್ಲಿ ವರ್ತಕರು ಸಹ ಕಾರ್ಯದರ್ಶಿ ವರ್ಗಾವಣೆ ಆಗುವವರೆಗೂ ಖರೀದಿ ಆರಂಭಿಸಲ್ಲ ಎಂದು ಧರಣಿ ನಡೆಸಿದರು. ಇದೇ ಸಮಯದಲ್ಲಿ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರ ತಾಲೂಕುಗಳ ರೈತರು ಮೆಕ್ಕೆಜೋಳ ತಗೆದುಕೊಂಡು ಎಪಿಎಂಸಿಗೆ ಬೆಳಗ್ಗೆಯೇ ಬಂದಿದ್ದರು. ಆದರೆ ವರ್ತಕರು ಎಪಿಎಂಸಿ ಕಾರ್ಯದರ್ಶಿ ವರ್ಗಾವಣೆಯಾಗುವವರೆಗೂ ಖರೀದಿ ಮಾಡಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಆಕ್ರೋಶಗೊಂಡ ರೈತರು, ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಉತ್ಪನ್ನ ಖರೀದಿ ಸ್ಥಗಿತಗೊಳಿಸಿರುವ ವಿಚಾರ ಮೊದಲೇ ತಿಳಿಸಿದ್ದರೆ ನಾವು ಮಾರಾಟಕ್ಕೆ ಬರುತ್ತಿರಲಿಲ್ಲ. ಈಗ ಏಕಾಏಕಿ ಖರೀದಿ ಸ್ಥಗಿತಗೊಳಿಸಿದರೆ ಬೇರೆ ಬೇರೆ ತಾಲೂಕುಗಳಿಂದ ಬಂದಿರುವ ರೈತರು ಏನು ಮಾಡಬೇಕು. ಉತ್ಪನ್ನದ ಸಾಗಾಟ ಹಣ ನೀಡುವರು ಯಾರು ಎಂದು ಪ್ರಶ್ನಿಸಿ ರೈತರು, ಎಪಿಎಂಸಿ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ವರ್ತಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.