ದಾವಣಗೆರೆ/ಹಾವೇರಿ:ಜಿಲ್ಲೆಯಲ್ಲಿ ಇಂದಿನ ಕೊರೊನಾ ವರದಿಯ ಸಂಪೂರ್ಣ ಅಂಕಿ-ಅಂಶಗಳು ಈ ಕೆಳಗಿನಂತಿವೆ.
ದಾವಣಗೆರೆ:ಜಿಲ್ಲೆಯಲ್ಲಿಂದು41 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 195 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ದಾವಣಗೆರೆ 18, ಹರಿಹರ 9, ಚನ್ನಗಿರಿ 6, ಹೊನ್ನಾಳಿಯಲ್ಲಿ 8 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ದಾವಣಗೆರೆ 83, ಹರಿಹರ 38, ಜಗಳೂರು 11, ಚನ್ನಗಿರಿ 27, ಹೊನ್ನಾಳಿ 31, ಅಂತರ್ ಜಿಲ್ಲೆಯ ಐವರು ಸೇರಿದಂತೆ ಒಟ್ಟು 195 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
45 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 251ಕ್ಕೇರಿದೆ. ಒಟ್ಟು 19,180 ಸೋಂಕಿತರಿದ್ದು, 17,694 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1235 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಮುಂದುವರಿದಿದೆ.