ಕರ್ನಾಟಕ

karnataka

ETV Bharat / state

ಹಾವೇರಿ: ಮಹಿಳಾ ವಸತಿ ನಿಲಯಕ್ಕೆ ಅಕ್ರಮ ಪ್ರವೇಶ; ಮೂವರ ಬಂಧನ - ಹಾವೇರಿ ಮಹಿಳಾ ವಸತಿ ನಿಲಯಕ್ಕೆ ಮೂವರು ಬಾಲಕರ ಅತಿಕ್ರಮ ಪ್ರವೇಶ

ರಾಣೆಬೆನ್ನೂರು ಪಟ್ಟಣದ ಶ್ರೀರಾಮನಗರದಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅತಿಕ್ರಮವಾಗಿ ಮೂವರು ಯುವಕರು ಪ್ರವೇಶಿಸಿದ್ದರು. ಇವರನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ.

ಮಹಿಳಾ ವಸತಿ ನಿಲಯಕ್ಕೆ ಮೂವರು ಬಾಲಕರ ಅತಿಕ್ರಮ ಪ್ರವೇಶ
ಮಹಿಳಾ ವಸತಿ ನಿಲಯಕ್ಕೆ ಮೂವರು ಬಾಲಕರ ಅತಿಕ್ರಮ ಪ್ರವೇಶ

By

Published : Jul 19, 2022, 10:11 PM IST

ಹಾವೇರಿ: ಅತಿಕ್ರಮವಾಗಿ ಮಹಿಳಾ ವಸತಿ ನಿಲಯದೊಳಗೆ ಪ್ರವೇಶಿಸಿದ್ದ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು, ಜೈಲಿಗೆ ಕಳುಹಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ನಡೆದಿದೆ.

ರಾಣೆಬೆನ್ನೂರು ಪಟ್ಟಣದ ಶ್ರೀರಾಮನಗರದಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಈ ಯುವಕರು ಅತಿಕ್ರಮವಾಗಿ ಪ್ರವೇಶಿಸಿದ್ದರು. ವಶಕ್ಕೆ ಪಡೆದವರನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಗ್ರಾಮದ ಯುವಕರು ಎನ್ನಲಾಗಿದೆ.

ಮಹಿಳಾ ವಸತಿ ನಿಲಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ಯುವಕರನ್ನು ಜೈಲಿಗೆ ಕಳುಹಿಸಿದ ಪೊಲೀಸರು

ಮಾರುತಿ ದೇವರಗುಡ್ಡ, ನಾಗರಾಜ ಬೆನ್ನೂರು ಮತ್ತು ಮಾಲತೇಶ ವಾಲ್ಮೀಕಿ ಎಂಬ ಯುವಕರನ್ನ ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಸತಿ ನಿಲಯದ ವಾರ್ಡನ್ ಶಶಿರೇಖಾ ಎಂಬುವವರು ನೀಡಿದ ದೂರಿನ ಮೇರೆಗೆ ಮೂವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ಜೈಲಿಗೆ ಕಳುಹಿಸಿದ್ದಾರೆ. ವಸತಿ ನಿಲಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದ ಯುವಕರು ಯುವತಿಯೊಬ್ಬಳ ಮೊಬೈಲ್ ಕಿತ್ತುಕೊಂಡಿದ್ದರು ಎನ್ನಲಾಗಿದೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಇಂಜಿನಿಯರಿಂಗ್ ನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ 'ರೀತಿ' ಯೋಜನೆ: ಸಚಿವರಿಗೆ ವರದಿ ಸಲ್ಲಿಸಿದ ಪ್ರೊ ಕರಿಸಿದ್ದಪ್ಪ ಸಮಿತಿ

For All Latest Updates

TAGGED:

ABOUT THE AUTHOR

...view details