ಹಾವೇರಿ:ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ನಡೆದಿದೆ.
ಹಾವೇರಿಯಲ್ಲಿ ರೈತರ ಮೇಲೆ ನರಿ ದಾಳಿ.. ಮೂವರಿಗೆ ಗಾಯ - ರೈತರ ಮೇಲೆ ನರಿ ದಾಳಿ
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ನಡೆಸಿದೆ.
![ಹಾವೇರಿಯಲ್ಲಿ ರೈತರ ಮೇಲೆ ನರಿ ದಾಳಿ.. ಮೂವರಿಗೆ ಗಾಯ ಹಾವೇರಿಯ ಬ್ಯಾಡಗಿಯಲ್ಲಿ ರೈತರ ಮೇಲೆ ನರಿ ದಾಳಿ](https://etvbharatimages.akamaized.net/etvbharat/prod-images/768-512-16582123-thumbnail-3x2-sanju.jpg)
ಹಾವೇರಿಯ ಬ್ಯಾಡಗಿಯಲ್ಲಿ ರೈತರ ಮೇಲೆ ನರಿ ದಾಳಿ
ಹರೀಶ್ ಲಮಾಣಿ, ಶಂಕರಪ್ಪ ಲಮಾಣಿ ಮತ್ತು ರುದ್ರಪ್ಪ ಲಮಾಣಿ (45) ಗಾಯಗಳಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಡೆ, ಕೈ- ಕಾಲುಗಳಿಗೆ ನರಿ ಕಚ್ಚಿ ಗಾಯಗೊಳಿಸಿದೆ. ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದೆ ಎಂಬುದು ತಿಳಿದುಬಂದಿದೆ.
ಓದಿ:ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ