ಹಾವೇರಿ: ಹೊಸ ವರ್ಷಾಚರಣೆ ಹಿನ್ನಲೆ ನದಿಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ನೂಕಾಪುರ ಗ್ರಾಮದ ನವೀನ್, ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ವಿಕಾಸ್ ಮತ್ತು ನೇಪಾಳ ಮೂಲದ ಪ್ರೇಮ ಪಾಂಗಲ್ ಎಂದು ಗುರುತಿಸಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ನಿಸರ್ಗ ಡಾಬಾದಲ್ಲಿ ಕೆಲಸ ಮಾಡುವ 11 ಯುವಕರು ಮುದೇನೂರಿನ ತುಂಗಭದ್ರಾ ನದಿಗೆ ಈಜಲು ತೆರಳಿದ್ದರು. ಈ ಸಮಯದಲ್ಲಿ ಈಜು ಬಾರದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.