ಹಾವೇರಿ: ಸಚಿವ ಸ್ಥಾನ ಸಿಗಲಿ, ಸಿಗದಿರಲಿ ಒಳ್ಳೆಯ ಕೆಲಸ ಮಾಡಬೇಕು ಎನ್ನುವುದು ನನ್ನ ಹಂಬಲ ಎಂದು ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಸಚಿವ ಸ್ಥಾನ ಸಿಕ್ಕರೂ, ಸಿಗದಿದ್ದರೂ ಉತ್ತಮ ಕೆಲಸ ಮಾಡುವೆ: ನೆಹರು ಓಲೇಕಾರ್ - etv bharath
ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡುವೆ. ಸರ್ಕಾರದ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ತಪ್ಪಗುಂಡಿ ಗ್ರಾಮಸ್ಥರು ನೆರೆ ನಿರಾಶ್ರಿತರಿಗೆ ತಂದಿದ್ದ ಸಾಮಗ್ರಿಗಳನ್ನು ಹಾವೇರಿಯಲ್ಲಿ ವಿತರಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಿಂದ ಹೈಕಮಾಂಡ್‌ಗೆ ಹಲವು ಶಾಸಕರ ಹೆಸರುಗಳನ್ನು ಕಳಿಸಿಕೊಡಲಾಗಿದೆ. ಅಲ್ಲಿ ಫೈನಲ್ ಆದ ನಂತರ ಯಾರು ಸಚಿವರಾಗುತ್ತಾರೆ ಎಂಬುದು ಗೊತ್ತಾಗುತ್ತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊಹಾಪೂಹಾಗಳು ಕೇಳಿಬರುವುದು ಸಹಜ. ಸಚಿವ ಸ್ಥಾನ ಸಿಕ್ಕವರು ಒಳ್ಳೆಯ ಕೆಲಸ ಮಾಡಬೇಕು ಸಚಿವ ಸ್ಥಾನ ಸಿಗದವರು ಪಕ್ಷದ ಮತ್ತು ಸರ್ಕಾರದ ಕೆಲಸ ಮಾಡಬೇಕು. ಒಟ್ಟಾರೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುವೆ ಎಂದು ನೆಹರು ಓಲೇಕಾರ್ ಸ್ಪಷ್ಟಪಡಿಸಿದ್ರು.