ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ನಾಯಕರ ಗುಂಪು ರಾಜಕಾರಣಂದಿಂದ ಪಕ್ಷ ಮೂರು ಭಾಗವಾಗಿದೆ; ಸಚಿವ ಕೆ.ಎಸ್.ಈಶ್ವರಪ್ಪ - ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರ ಮತಯಾಚನೆ

ಮುಂಬರುವ ವಿಧಾನಸಭೆ ಚುನಾವಣೆ ಮುಂಚೆಯೇ ಹಗಲು-ರಾತ್ರಿ ಮುಖ್ಯಮಂತ್ರಿ ಕುರ್ಚಿ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದರು ಅವರ ಅಧಿಕಾರ ಪಿತ್ತ ಇನ್ನೂ ಉಳಿದಿದೆ. ಇನ್ನೂ ಡಿಕೆಶಿ ಅವರು ಹವಾಲ ಹಣ ವರ್ಗಾವಣೆ ದಂಧೆಯಲ್ಲಿ ಮುಂದುವರೆದಿದ್ದಾರೆ. ಎಲ್ಲಿ ಮತ್ತೊಂದು ಬಾರಿ ಜೈಲಿಗೆ ಹೋಗ್ತೆನಿ ಎಂಬ ಭಯದಿಂದ ಅಲೆದಾಡುತ್ತಿದ್ದಾರೆ ಎಂದರು.

ks-eshwarappa
ಸಚಿವ ಕೆ.ಎಸ್.ಈಶ್ವರಪ್ಪ

By

Published : Oct 24, 2020, 8:04 PM IST

ರಾಣೆಬೆನ್ನೂರ:ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮತ್ತು ಹೆಚ್.ಕೆ.ಪಾಟೀಲರ ನಡುವೆ ಗುಂಪುಗಳಾಗುವ ಮೂಲಕ ಕಾಂಗ್ರೆಸ್ ಮೂರು ಭಾಗವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಣೆಬೆನ್ನೂರ ನಗರದಲ್ಲಿ ‌ಪಶ್ಚಿಮ ಪದವೀದರ ಮತಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಅದು ಪ್ರಜಾಪ್ರಭುತ್ವದಲ್ಲಿ ‌ನಂಬಿಕೆ ಇಲ್ಲದ ಪಕ್ಷವಾಗಿದೆ. ಈಗ ನಡೆಯುತ್ತಿರುವ ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಹೋರಾಟ ನೋಡಿದರೆ ಅಯ್ಯೋ ಅನಿಸುತ್ತದೆ ಎಂದು ಕಿಚಾಯಿಸಿದರು.

ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರ ಮತಯಾಚನೆ ಮಾಡಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ

ಮುಂಬರುವ ವಿಧಾನಸಭೆ ಚುನಾವಣೆಗೂ ಮುಂಚೆಯೇ ಹಗಲು-ರಾತ್ರಿ ಮುಖ್ಯಮಂತ್ರಿ ಕುರ್ಚಿ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದರು ಅವರ ಅಧಿಕಾರ ಪಿತ್ತ ಇನ್ನೂ ಉಳಿದಿದೆ. ಇನ್ನೂ ಡಿಕೆಶಿ ಅವರು ಹವಾಲ ಹಣ ವರ್ಗಾವಣೆ ದಂಧೆಯಲ್ಲಿ ಮುಂದುವರೆದಿದ್ದಾರೆ. ಎಲ್ಲಿ ಮತ್ತೊಂದು ಬಾರಿ ಜೈಲಿಗೆ ಹೋಗ್ತೆನಿ ಎಂಬ ಭಯದಿಂದ ಅಲೆದಾಡುತ್ತಿದ್ದಾರೆ ಎಂದರು.

ABOUT THE AUTHOR

...view details