ಹಾವೇರಿ: ಕೊರೊನಾ ರೂಪಾಂತರಗಳ ಮೇಲೆ ನಿರಂತರ ಅಧ್ಯಯನ ಮಾಡಲಾಗುತ್ತಿದೆ. ಆಲ್ ಇಂಡಿಯಾ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ಇವುಗಳ ಮೇಲೆ ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ರೂಪಾಂತರಗಳ ಅಧ್ಯಯನ ನಡೆಸಲಾಗುತ್ತಿದೆ. ಲ್ಯಾಬ್‌ಗಳಲ್ಲಿ ನಿರಂತರ ಪರೀಕ್ಷೆಗಳು ನಡೆಯುತ್ತಿವೆ. ಕೊರೊನಾ ಗುಣಮುಖರ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಪರಿಣಾಮಗಳನ್ನ ಸಹ ಅಧ್ಯಯನ ಮಾಡಲಾಗುತ್ತಿದೆ. ರೂಪಾಂತರ ವೈರಸ್ ಮತ್ತು ಕೊರೊನಾ ಕಾಣಿಸಿಕೊಂಡು ಆರೋಗ್ಯ ಸುಧಾರಿಸಿದ ಮೇಲೆ ಕಾಣಿಸಿಕೊಳ್ಳುವ ಪರಿಣಾಮಗಳ ಮೇಲೆಯೂ ಸಹ ನಿಗಾ ಇಡಲಾಗಿದೆ ಎಂದರು.
ರಾಜ್ಯದಲ್ಲಿ ರೂಪಾಂತರ ವೈರಸ್ ಪತ್ತೆ ಹಚ್ಚಲು ಜಿನೂನ್ ಪರೀಕ್ಷಾ ಕೇಂದ್ರ ಆರಂಭಿಸಲಾಗಿದೆ. ದೇಶಾದ್ಯಂತ ಮತ್ತು ರಾಜ್ಯದಲ್ಲಿ ಈ ಕುರಿತಂತೆ ಏನು ನಿಯಮಗಳನ್ನ ಪಾಲಿಸಬೇಕು ಅವುಗಳನ್ನ ಪಾಲಿಸಲಾಗುತ್ತಿದೆ. ಚಿಕ್ಕಮಕ್ಕಳ ಮೇಲೆ ಮಿಸ್-ಸಿ ಮತ್ತು ಎನೆಕ್ ರೂಪಾಂತರ ವೈರಸ್‌ಗಳ ಪರಿಣಾಮವನ್ನ ತಿಳಿಯಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.