ಹಾವೇರಿ :ಮೂಲ ಬಿಜೆಪಿಗ ವಲಸೆ ಬಿಜೆಪಿಗ ಅಂತಾ ನಮ್ಮ ಪಕ್ಷದಲ್ಲಿ ಇಲ್ಲ. ಆದರೆ, ಸ್ವಲ್ಪ ವೈಮಸ್ಸು ಇರಬಹುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹಿರೇಕೆರೂರಲ್ಲಿ ಮಾತನಾಡಿದ ಅವರು, ಅವರೆಲ್ಲ ತ್ಯಾಗ ಮಾಡಿದ್ದಕ್ಕೆ ತಮ್ಮ ಸರ್ಕಾರ ರಚನೆಯಾಗಿದೆ. ಕೇಂದ್ರ ಮತ್ತು ರಾಜ್ಯ ನಾಯಕರು ಮೂಲ ಬಿಜೆಪಿ ಮತ್ತು ವಲಸೆ ಬಿಜೆಪಿ ನಾಯಕರ ನಡುವೆ ಸಮತೋಲನ ಕಾಪಾಡಿಕೊಂಡು ಹೋಗುತ್ತಾರೆ. ಅದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ಅಂದರೆ ಕಾರ್ಯಕರ್ತನ ಚುನಾವಣೆ. ಇಲ್ಲಿ ಕಾರ್ಯಕರ್ತನೆ ನಾಯಕ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಕರ್ತನನ್ನು ಗೌರವಿಸುತ್ತವೆ.
ಗ್ರಾಮ ಪಂಚಾಯತ್ ಚುನಾವಣೆ ಸಿದ್ಧತೆ ಕುರಿತಂತೆ ಇದುವರೆಗೊ ಯಾವ ಪಕ್ಷಗಳು ಈ ರೀತಿ ನಿರ್ಧಾರ ಕೈಗೊಂಡಿಲ್ಲ. ಬಿಜೆಪಿ ಮಾತ್ರ ಗ್ರಾಮ ಸ್ವರಾಜ್ ಅಂತಾ ಸಭೆಗಳನ್ನು ಆಯೋಜಿಸಿದ್ದು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.