ಕರ್ನಾಟಕ

karnataka

ETV Bharat / state

ನವರಾತ್ರಿಯಲ್ಲೇ ದೇವಿ ಮೈಮೇಲಿದ್ದ ಆಭರಣ ಕಳ್ಳತನ: ರಾತ್ರೋರಾತ್ರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು - ದೇವಿ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿ

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಹೊರವಲಯದಲ್ಲಿರೋ ಆನಿಕೇರಿ ಬಳಿ ಇರುವ ದುರ್ಗಮ್ಮದೇವಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು, ದೇವಿ ಮೈಮೇಲೆ ಹಾಕಿದ್ದ ಚಿನ್ನದ ತಾಳಿ, ಕಣ್ಣು, ತಾಮ್ರದ ಕೊಡ, ತಾಮ್ರದ ಉತ್ಸವ ಮೂರ್ತಿ ಸೇರಿದಂತೆ ವಿವಿಧ ರೀತಿಯ ಆಭರಣಗಳನ್ನ ದೋಚಿಕೊಂಡು ಹೋಗಿದ್ದಾರೆ.

ರಾತ್ರೋರಾತ್ರಿ ದೇವಸ್ಥಾನಕ್ಕೆ ಕನ್ನ

By

Published : Oct 7, 2019, 9:24 AM IST

Updated : Oct 7, 2019, 11:32 AM IST

ಹಾವೇರಿ:ಬೀಗ ಒಡೆದು ಕಳ್ಳರು ದೇವಸ್ಥಾನದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ಹೊರವಲಯದಲ್ಲಿರೋ ಆನಿಕೇರಿ ಬಳಿ ಇರುವ ದುರ್ಗಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.

ರಾತ್ರೋರಾತ್ರಿ ದೇವಸ್ಥಾನಕ್ಕೆ ಕನ್ನ

ಶನಿವಾರ ರಾತ್ರೋರಾತ್ರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು, ದೇವಿ ಮೈಮೇಲೆ ಹಾಕಿದ್ದ ಚಿನ್ನದ ತಾಳಿ, ಕಣ್ಣು, ತಾಮ್ರದ ಕೊಡ, ತಾಮ್ರದ ಉತ್ಸವ ಮೂರ್ತಿ ಸೇರಿದಂತೆ ವಿವಿಧ ರೀತಿಯ ಆಭರಣಗಳನ್ನ ದೋಚಿಕೊಂಡು ಹೋಗಿದ್ದಾರೆ.

ರಾತ್ರಿಯಿಂದ ಮಳೆ ಸುರಿಯುತ್ತಿದ್ದರಿಂದ ದೇವಸ್ಥಾನದ ಬಳಿ ಯಾರು ಬಂದಿರಲಿಲ್ಲ. ಯಾರೂ ಇಲ್ಲದ್ದನ್ನ ನೋಡಿಕೊಂಡು ಖದೀಮರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಭಾನುವಾರ ಭಕ್ತರು ದೇವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಹಬ್ಬದ ಸಮಯ ಆಗಿರೋದ್ರಿಂದ ಭಕ್ತರು ಕಳ್ಳತನದ ನಂತರ ಮತ್ತೆ ದೇವಿಯನ್ನ ಸಿಂಗರಿಸಿ ಪೂಜೆ ಮಾಡಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Last Updated : Oct 7, 2019, 11:32 AM IST

ABOUT THE AUTHOR

...view details