ಹಾವೇರಿ: ಜಿಲ್ಲೆಯಲ್ಲಿ ಕಳ್ಳರ ಕಣ್ಣು ಇದೀಗ ದೇವಸ್ಥಾನಗಳ ಮೇಲೆ ಬಿದ್ದಿದೆ. ಅದರಲ್ಲೂ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದೇವಸ್ಥಾನಗಳನ್ನ ಟಾರ್ಗೆಟ್ ಮಾಡಿರುವ ಕಳ್ಳರು, ರಾತ್ರಿ ವೇಳೆ ತಮ್ಮ ಕರಾಮತ್ತು ತೋರಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್,ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿನ 10 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ. ಪ್ರತಿ ದೇವಸ್ಥಾನಗಳಲ್ಲಿ ಕಾಣಿಕೆ ಡಬ್ಬಿಯಲ್ಲಿರುವ 10 ಸಾವಿರದಿಂದ 50 ಸಾವಿರವರೆಗೆ ಇರುವ ಹಣ ದೋಚಿದ್ದಾರೆ.