ಹಾವೇರಿ:ಕಳೆದುಹೋದ ಆಕಳು ಮತ್ತು ಕರು ಹುಡುಕಲು ಹೋದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ನೆಗವಣಿಗೆ ಗ್ರಾಮದಲ್ಲಿ ನಡೆದಿದೆ.
ಆಕಳು, ಕರು ಹುಡುಕಲು ಹೋದ ಯುವಕ ಶವವಾಗಿ ಪತ್ತೆ - hanagal haveri latest news
ಕಳೆದುಹೋದ ಆಕಳು ಮತ್ತು ಕರು ಹುಡುಕಲು ಹೋದ ಈರಣ್ಣ ಎಂಬಾತ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ನೆಗವಣಿಗೆ ಗ್ರಾಮದಲ್ಲಿ ನಡೆದಿದೆ.
ಆಕಳು ಮತ್ತು ಕರು ಹುಡುಕಲು ಹೋದ ಯುವಕ ಶವವಾಗಿ ಪತ್ತೆ
ಮೃತ ಯುವಕನನ್ನ ಈರಣ್ಣ ನೀರಲಗಿ(28) ಎಂದು ಗುರುತಿಸಲಾಗಿದೆ. ನಿನ್ನೆ ಕಾಣೆಯಾಗಿದ್ದ ಆಕಳು ಮತ್ತು ಹೋರಿಕರು ಹುಡುಕಲು ಹೋಗಿದ್ದ ವೇಳೆ ಯುವಕ ಕಾಣೆಯಾಗಿದ್ದ ಎನ್ನಲಾಗಿದೆ.
ಇಂದು ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಸದ್ಯ ಈ ಕುರಿತಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.