ಹಾನಗಲ್: ತಾಲೂಕಿನ ಹನುಮಾಪುರ ಗ್ರಾಮದ ನಾಗಪ್ಪ ಶೃಂಗೇರಿ ಎಂಬ ವೃದ್ಧ ತನ್ನ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ.
ಪತ್ನಿಗೆ ಕ್ಯಾನ್ಸರ್... ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೆ ಪರಿತಪಿಸುತ್ತಿರುವ ವೃದ್ಧ - cancer hospital
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ತನ್ನ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೆ, ವೃದ್ಧನೊಬ್ಬ ಪರಿತಪಿಸುತ್ತಿರುವ ಘಟನೆ ಹಾನಗಲ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ನನ್ನ ಪತ್ನಿ ಭೀಮವ್ವ ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಈ ಲಾಕ್ಡೌನ್ ಕಾರಣದಿಂದ ಅವಳನ್ನ ಆಸ್ಪತ್ರೆಗೆ ಕರೆದೊಯ್ಯಲು ವಾಹನಗಳು ಸಿಗುತ್ತಿಲ್ಲ. ಹುಬ್ಬಳ್ಳಿ ಕಿಮ್ಸ್ ನಲ್ಲಿ, ಪ್ರತಿ ತಿಂಗಳು ಆಕೆಗೆ ತಪಾಸಣೆ ಮಾಡಿಸಿ ಔಷಧಿ ಕೊಡಿಸಬೇಕು ಎಂದು ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಾನೆ.
ಮೊದಲು ಕಡಿಮೆ ಕರ್ಚಿನಲ್ಲಿ ರೈಲು ಸಂಚಾರ ಮಾಡಿತ್ತಿದ್ದೆವು. ಆದರೆ ಇದೀಗ ಲಾಕ್ ಡೌನ್ ಪರಿಣಾಮ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕು, ಈಗ ಅವು ಸಹ ಸಿಗ್ತಿಲ್ಲ. ನಾವು ಕೂಲಿ ಮಾಡಿ ಜೀವನ ಸಾಗಿಸುತ್ತೇವೆ. ಖಾಸಗಿ ವಾಹನಗಳು ಸಿಕ್ಕರೂ ದುಬಾರಿ ಬಾಡಿಗೆ ಏನು, ಮಾಡಬೇಕು ಎಂಬುದು ದಿಕ್ಕು ತೋಚುತ್ತಿಲ್ಲ. ದಯವಿಟ್ಟು ನಮಗೆ ಹುಬ್ಬಳ್ಳಿ ಕಿಮ್ಸ್ ಗೆ ತೆರಳಲು ಅವಕಾಶ ಮಾಡಿಕೊಡಿ ಎಂದು ನಾಗಪ್ಪ ಶೃಂಗೇರಿ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ.
TAGGED:
cancer hospital