ಹಾವೇರಿ: ಮಳೆಗಾಲ ಮುಕ್ತಾಯವಾಗಿದ್ದು ಜಿಲ್ಲೆಯ ವರದಾ ನದಿ ಬ್ಯಾರೇಜ್‌ನಲ್ಲಿ ನೀರು ತಡೆಯಲಾಗಿದೆ. ಈ ನೀರು ತಡೆಯುವ ಬ್ಯಾರೇಜ್ ಕಂ ಸೇತುವೆಗಳು ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಕಿಲೋಮೀಟರ್ ಗಟ್ಟಲೇ ನಿಂತಿರುವ ನೀರು, ನೀರಿನಿಂದ ಆವೃತವಾಗಿರುವ ನದಿಯ ದಂಡೆಗಳ ಹಸಿರು ಕಣ್ಣಿಗೆ ಮುದ ನೀಡುತ್ತಿದೆ.
ಪ್ರವಾಸಿಗರ ಫೇವರೆಟ್ ವರದಾ ಬ್ಯಾರೇಜ್.. ಹೃನ್ಮನ ತಣಿಸುವ ನದಿ ಸೌಂದರ್ಯ
ವರದಾ ನದಿ ಬ್ಯಾರೇಜ್‌ನ ಜಲಪಾತದಲ್ಲಿ ಹರಿಯುವ ನೀರು. ಅದರ ಜುಳುಜುಳು ನಿನಾದ ಕಿವಿಯಲ್ಲಿ ಮಾರ್ದನಿಸುತ್ತದೆ. ನಿಂತ ನೀರಿನಲ್ಲಿ ಈಜು ಪಟುಗಳ ಸಾಹಸ ಕಣ್ಮನ ಸೆಳೆಯುತ್ತದೆ. ಗ್ರಾಮಗಳ ಯುವಕರು ಬಿಸಿಲಾಗುತ್ತಿದ್ದಂತೆ ಬ್ಯಾರೇಜ್‌ಗಳ ಕಡೆ ಮುಖಮಾಡುತ್ತಾರೆ. ಮನತಣಿಯುವಷ್ಟು ನೀರಿನಲ್ಲಿ ಈಜುತ್ತಾರೆ. ಬ್ಯಾರೇಜ್‌ಗಳು ಸೌಂದರ್ಯದ ಕಣಿಗಳಂತಾಗುತ್ತಿದ್ದು ಯುವಜನತೆಯ ಸೆಲ್ಫಿ ತಾಣಗಳಾಗಿ ಪರಿಣಮಿಸಿವೆ.
ತುಂಗಭದ್ರಾ, ವರದಾ, ಧರ್ಮಾ ಕುಮದ್ವತಿ ನದಿಗಳು ಹಾವೇರಿ ಜಿಲ್ಲೆಯ ಜೀವನಾಡಿಗಳು. ಈ ನದಿಗಳು ಜಿಲ್ಲೆಯ ಜನರ ನೀರಿನ ದಾಹ ತೀರಿಸುತ್ತವೆ. ಅದರಲ್ಲೂ ವರದಾ ನದಿಗೆ ಪ್ರತಿ 10 ಕಿ.ಮೀಟರ್‌ಗೆ ಒಂದರಂತೆ ಬ್ಯಾರೇಜ್ ಕಟ್ಟಲಾಗಿದೆ. ಒಂದು ಕಡೆ ಸೇತುವೆ ಮತ್ತೊಂದು ಕಡೆ ಬ್ಯಾರೇಜ್ ಆಗಿರುವ ಈ ಸೇತುವೆಗಳು ಬೇಸಿಗೆ ಕಾಲದಲ್ಲಿ ರೈತರ ಜಮೀನುಗಳಿಗೆ ನೀರುಣಿಸುತ್ತವೆ.
ಬ್ಯಾರೇಜ್‌ನ ಜಲಪಾತದಲ್ಲಿ ಹರಿಯುವ ನದಿಯ ಅಲೆಗಳ ಝುಳು ಝುಳು ನಿನಾದ ಕಿವಿಯಲ್ಲಿ ಮಾರ್ದನಿಸುತ್ತದೆ. ನಿಂತ ನೀರಿನಲ್ಲಿ ಈಜು ಪಟುಗಳ ಸಾಹಸ ಕಣ್ಮನ ಸೆಳೆಯುತ್ತದೆ. ಗ್ರಾಮಗಳ ಯುವಕರು ಬಿಸಿಲಾಗುತ್ತಿದ್ದಂತೆ ಬ್ಯಾರೇಜ್‌ಗಳ ಕಡೆ ಮುಖಮಾಡುತ್ತಾರೆ. ಮನತಣಿಯುವಷ್ಟು ನೀರಿನಲ್ಲಿ ಈಜುತ್ತಾರೆ. ಬ್ಯಾರೇಜ್‌ಗಳು ಸೌಂದರ್ಯದ ಕಣಿಗಳಂತಾಗುತ್ತಿದ್ದು ಯುವಜನತೆಯ ಸೆಲ್ಫಿ ತಾಣಗಳಾಗಿ ಪರಿಣಮಿಸಿವೆ. ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಸೂರ್ಯ ರಶ್ಮಿಗಳ ಹೊಯ್ದಾಟ ನೋಡುವುದೇ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದೆ.