ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಜಲಕಂಟಕ: ನಿಜವಾಯ್ತಾ ದೇವರಗುಡ್ಡದ ಮಾಲತೇಶಸ್ವಾಮಿ ಕಾರ್ಣಿಕ? - haveri devaragudda latest news

ಮಹಾನವಮಿಯಂದು ದೇವರಗುಡ್ಡದಲ್ಲಿ ಗೊರವಪ್ಪ ನುಡಿದಿದ್ದ ಕಾರ್ಣಿಕ ನಿಜವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಳೆಯಿಂದ ಅತಿವೃಷ್ಟಿ ಸಂಭವಿಸಿದ್ದು, ಜನರು ಕಂಗಾಲಾಗಿದ್ದಾರೆ. ಇದನ್ನು ಕಾರ್ಣಿಕದಲ್ಲಿ ಹೇಳಲಾಗಿತ್ತು ಎಂದು ದೇವಸ್ಥಾನದ ಅರ್ಚಕ ಸಂತೋಷ್ ಭಟ್ ತಿಳಿಸಿದ್ದಾರೆ.

ನಿಜವಾದ ದೇವರಗುಡ್ಡ ಮಾಲತೇಶಸ್ವಾಮಿ ಕಾರ್ಣಿಕ

By

Published : Oct 23, 2019, 1:34 PM IST

ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕ ನಿಜವಾಗಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.

ನಿಜವಾದ ದೇವರಗುಡ್ಡ ಮಾಲತೇಶಸ್ವಾಮಿ ಕಾರ್ಣಿಕ

ಮಹಾನವಮಿಯಂದು ನಡೆದಿದ್ದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪ ಅವರು ಘಟಸರ್ಪ ಕಂಗಾಲಾದೀತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದರು. ಅಂದು ಕಾರ್ಣಿಕ ಕುರಿತಂತೆ ಮಾನವ ಸಂಕುಲ ಕಷ್ಟಕ್ಕೆ ಸಿಲುಕುತ್ತದೆ ಎಂಬ ವಿಶ್ಲೇಷಿಸಲಾಗಿತ್ತು.

ಅದರಂತೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಜನ ಅತಿವೃಷ್ಟಿಯಿಂದ ಕಂಗಾಲಾಗಿದ್ದಾರೆ ಎಂದು ದೇವಸ್ಥಾನದ ಅರ್ಚಕ ಸಂತೋಷ ಭಟ್ ತಿಳಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ದೇವರವಾಣಿ ಸತ್ಯಕ್ಕೆ ಹತ್ತಿರವಾಗಿರುತ್ತದೆ. ಅದರಂತೆ ಈ ವರ್ಷದ ಕಾರ್ಣಿಕ ಸಹ ಸತ್ಯಕ್ಕೆ ಹತ್ತಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details