ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಸರಣಿ ಮತ್ತೆ ಮುಂದುವರೆದಿದೆ. ಇದೀಗ ಮತ್ತೋರ್ವ ರೈತ ನೇಣಿಗೆ ಶರಣಾಗಿದ್ದಾರೆ.
ಸಾಲದ ಸುಳಿ... ರಾಣೆಬೆನ್ನೂರಲ್ಲಿ ಮುಂದುವರಿದ ರೈತರ ಆತ್ಮಹತ್ಯೆ! - recent farmer suicide
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಸಾಲಬಾಧೆಯಿಂದ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಪ್ಪೆಲೂರು ಗ್ರಾಮದ ಹನುಮಂತಪ್ಪ ಬೀರಪ್ಪ ಆಡಿನವರ ನೇಣಿಗೆ ಶರಣಾದವರು.
ರಾಣೆಬೆನ್ನೂರಲ್ಲಿ ಮುಂದುವರಿದ ರೈತನ ಆತ್ಮಹತ್ಯೆ ..!
ರಾಣೆಬೆನ್ನೂರು ತಾಲೂಕಿನ ಕುಪ್ಪೆಲೂರು ಗ್ರಾಮದಲ್ಲಿ ಹನುಮಂತಪ್ಪ ಬೀರಪ್ಪ ಆಡಿನವರ (35) ಎಂಬ ರೈತ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕೆವಿಜಿ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ಗಳಲ್ಲಿ ಸುಮಾರು ಎರಡು ಲಕ್ಷ ರೂ. ಸಾಲ ಮಾಡಿದ್ದು, ಅದನ್ನು ತೀರಿಸಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ತಾಲೂಕಿನಾದ್ಯಂತ ಒಟ್ಟು ಆರು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.