ರಾಣೆಬೆನ್ನೂರು:ಹಾವೇರಿಯಲ್ಲಿ ಕೊರೊನಾ ವೈರಸ್ ಹಾವಳಿ ಕೊಂಚ ಮಟ್ಟಿಗೆ ಸುಧಾರಿಸಿದ ಪರಿಣಾಮ ರೈತ ಸಮುದಾಯ ಕೃಷಿಯತ್ತ ಮುಖ ಮಾಡಿದೆ.
ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡುತ್ತಿರುವ ರೈತ ಸಮೂಹ - The land is blended
ಹಾವೇರಿಯಲ್ಲಿ ಉತ್ತಮ ಮಳೆ ಸುರಿದಿದ್ದು, ರೈತ ಸಮುದಾಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಭೂಮಿ ಹದ ಮಾಡುತ್ತಿರುವ ರೈತ
ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ, ಕುಪೇಲೂರು ಹೋಬಳಿ ವ್ಯಾಪ್ತಿಯ ಸುತ್ತಮುತ್ತ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ, ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಮಾಡುವಲ್ಲಿ ನಿರತರಾಗಿದ್ದಾರೆ.
ರಾಜ್ಯಕ್ಕೆ ಜೂನ್ ಮೊದಲ ವಾರ ಮಾನ್ಸೂನ್ ಮಳೆ ಆಗಮಿಸಲಿದೆ. ಅಷ್ಟರೊಳಗೆ ಭೂಮಿಯನ್ನು ಎರಡು-ಮೂರು ಬಾರಿ ಹದ ಮಾಡಲಾಗುತ್ತದೆ. ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ಮೆಕ್ಕೆಜೋಳ, ತೊಗರಿ, ಶೇಂಗಾ ಬೀಜ ವಿತರಣೆ ಮಾಡಲಾಗಿದೆ.