ಕರ್ನಾಟಕ

karnataka

ETV Bharat / state

ಹಾವೇರಿ : ಚಾಕುವಿನಿಂದ ಇರಿದು ಪತಿಯಿಂದ ಪತ್ನಿ ಕೊಲೆ - haveri murder

ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಂಡ, ಹೆಂಡತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ನಡೆದಿದೆ.

murder
ಪತ್ನಿಯನ್ನೇ ಕೊಲೆಗೈದ ಪತಿ

By ETV Bharat Karnataka Team

Published : Dec 23, 2023, 7:08 AM IST

ಹಾವೇರಿ : ಚಾಕುವಿನಿಂದ ಇರಿದು ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪವಿತ್ರಾ ಹಳ್ಳೇರ (22) ಕೊಲೆಯಾದ ಮಹಿಳೆ. ರೇವಣ್ಣೆಪ್ಪ ಹಳ್ಳೇರ ಕೊಲೆಗೈದ ಆರೋಪಿ ಗಂಡ.

ಕ್ಷುಲ್ಲಕ ಕಾರಣಕ್ಕಾಗಿ ಗಂಡ, ಹೆಂಡತಿ ಶುಕ್ರವಾರ ಸಂಜೆ ಜಗಳವಾಡಿದ್ದಾರೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ಗಾಯಗೊಂಡಿದ್ದ ಪವಿತ್ರಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅಣ್ಣನಿಂದ ತಮ್ಮನ ಹತ್ಯೆ : ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿತ್ತು. ಮೃತ ವ್ಯಕ್ತಿಯನ್ನು ಪವನ್ ಕಟವಾಟೆ (30) ಎಂದು ಗುರುತಿಸಲಾಗಿದೆ. ರಾಜು ಕೊಲೆಗೈದ ಆರೋಪಿ. ಪವನ್ ಮನೆ ಬಿಟ್ಟು ಹುಬ್ಬಳ್ಳಿಯ ವಿಜಯನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಹೀಗಿದ್ದರೂ ಮದ್ಯ ಸೇವಿಸಿ ಅಣ್ಣನ ಜೊತೆ ಜಗಳವಾಡುತ್ತಿದ್ದ. ಡಿಸೆಂಬರ್​ 20 ರ ಬುಧವಾರ ಪವನ್​ ಅಣ್ಣನ ಮನೆಗೆ ಬಂದು ಕ್ಯಾತೆ ತೆಗೆದಿದ್ದಾನೆ. ಇದರಿಂದ ಕೋಪಗೊಂಡ ರಾಜು, ಪವನ್​ ಮನೆಗೆ ಬಂದು ಮಲಗಿದ್ದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಹುಬ್ಬಳ್ಳಿ : ಅಣ್ಣನಿಂದ ತಮ್ಮನ ಹತ್ಯೆ

ಮಗ ಮಾಡಿದ್ದ ಸಾಲಕ್ಕೆ ತಂದೆ ಕೊಲೆ : ಮಗ ಮಾಡಿದ್ದ 700 ರೂಪಾಯಿ ಸಾಲದ ವಿಚಾರಕ್ಕೆ ನಡೆದ ಜಗಳದಲ್ಲಿ ತಂದೆಯನ್ನು ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಗೋಕಾಕಿನ 12 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಗೋಕಾಕ್​ ತಾಲೂಕಿನ ಮರಡಿಮಠ ಗ್ರಾಮದಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೊಲೆ ಪ್ರಕರಣ ನಡೆದಿತ್ತು. ಸಾಲದ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.

ಮಾನಿಂಗ ಗಾಯಕವಾಡ (41) ಕೊಲೆಯಾಗಿದ್ದ ವ್ಯಕ್ತಿ. ಇವರ ಮಗ ಹನುಮಂತ ಗಾಯಕವಾಡ ಪಕ್ಕದ ಮನೆಯ ರಾಜು ಶಂಕರ್ ಭಜಂತ್ರಿ ಬಳಿ 700 ರೂಪಾಯಿ ಸಾಲ ಪಡೆದುಕೊಂಡಿದ್ದ. ಬಳಿಕ, ಮರಳಿಸುವ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಏರ್ಪಟ್ಟಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಗಲಾಟೆಯಲ್ಲಿ ಮಾನಿಂಗ ಕೊಲೆಯಾಗಿದ್ದರು.

ಇದನ್ನೂ ಓದಿ :ಮಗ ಮಾಡಿದ್ದ 700 ರೂಪಾಯಿ ಸಾಲಕ್ಕೆ ತಂದೆ ಕೊಲೆ: ಅಪರಾಧಿಗಳಿಗೆ 9 ವರ್ಷ ಜೈಲು ಸಜೆ

ABOUT THE AUTHOR

...view details