ಕರ್ನಾಟಕ

karnataka

ETV Bharat / state

ಎಲೆಕೋಸಿಗೆ ಬೆಲೆ ಸಿಗದೆ ಬೆಳೆಯನ್ನೇ ನಾಶ ಮಾಡಿದ ರೈತರು - ಹಾವೇರಿ ಕ್ಯಾಬೇಜ್​ ಬೆಳೆ ನಾಶಪಡಿಸಿದ ರೈತರು

ಕೊರೊನಾದಿಂದಾಗಿ ಹೊಲದಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಗೆ ಸರಿಯಾದ ಬೆಲೆ ದೊರೆಯದ ಕಾರಣ ಬೇಸರಗೊಂಡ ರೈತರಿಬ್ಬರು, ಬೆಳೆದ ಬೆಳೆಯನ್ನೆಲ್ಲಾ ನಾಶ ಮಾಡಿದ್ದಾರೆ.

farmers who destroyed the cabbage crop
ಕ್ಯಾಬೇಜ್​ ಬೆಳೆ ನಾಶಪಡಿಸುತ್ತಿರುವ ರೈತರು

By

Published : Jul 1, 2020, 9:15 PM IST

ಹಾವೇರಿ:ಹೊಲದಲ್ಲಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ರೈತರಿಬ್ಬರು ಮೂರೂವರೆ ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು​ ಬೆಳೆಯನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಭೋಗಾವಿಯಲ್ಲಿ ನಡೆದಿದೆ.

ಎಲೆಕೋಸು​ ಬೆಳೆ ನಾಶ ಮಾಡುತ್ತಿರುವ ರೈತರು

ಕೊರೊನಾದಿಂದಾಗಿ ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಬೆಳೆ ಮಾರಿದರೆ ಅದಕ್ಕೆ ಸಿಂಪಡಿಸಿದ ಕ್ರಿಮಿನಾಶಕದ ಖರ್ಚೂ ಬರುವುದಿಲ್ಲ. ಕೊರೊನಾ ಇರುವುದರಿಂದ ವ್ಯಾಪಾರಸ್ಥರು ಸಹ ಈ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಎಕರೆಗೆ 25 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ರೈತರು ನಾಶ ಮಾಡಿದ್ದಾರೆ.

ಶಿವಪ್ಪ ಮುತ್ತಿಗಿ ಮತ್ತು ಪರಮೇಶಪ್ಪ ಎಂಬ ಇಬ್ಬರು ರೈತರು ತಾವು ಬೆಳೆದಿದ್ದ ಎಲೆಕೋಸು ಬೆಳೆಯನ್ನು ​​ಟ್ರ್ಯಾಕ್ಟರ್​ ಮೂಲಕ ನಾಶ ಮಾಡಿದ್ದಾರೆ.

ABOUT THE AUTHOR

...view details