ಕರ್ನಾಟಕ

karnataka

ETV Bharat / state

ಹಾವೇರಿ: ಮಗನ ಸಾವಿನ ದುಃಖ ತಾಳದೆ ಆಘಾತದಿಂದ ತಾಯಿಯೂ ಸಾವು! - ಹಾವೇರಿ ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಸಾವಿನ ಸುದ್ದಿ ಕೇಳಿದ ತಾಯಿ ಆಘಾತಗೊಂಡು ಅಸುನೀಗಿರುವ ಹೃದಯವಿದ್ರಾವಕ ಘಟನೆ ಹಾವೇರಿಯಲ್ಲಿ ನಡೆದಿದೆ.

The death of the mother cannot prevent the grief of the son's death
ಹಾವೇರಿ: ಮಗನ ಸಾವಿನ ದುಃಖ ತಡೆಯಲಾರದೆ ತಾಯಿ ಸಾವು

By

Published : Mar 13, 2020, 2:57 PM IST

ಹಾವೇರಿ:ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಸಾವಿನ ದುಃಖ ತಡೆಯಲಾರದೆ ತಾಯಿಯೂ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

ಹಾವೇರಿ: ಮಗನ ಸಾವಿನ ದುಃಖ ತಡೆಯಲಾರದೆ ತಾಯಿ ಸಾವು

31ವರ್ಷದ ಬಸವರಾಜ ತೆಪ್ಪದ ಮತ್ತು 52 ವರ್ಷದ ಮೈನಾವತಿ ತೆಪ್ಪದ ಮೃತ ತಾಯಿ ಮತ್ತು ಮಗ. ಬಸವರಾಜ್ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇದರಿಂದ ತೀವ್ರ ದುಃಖಿತಳಾದ ತಾಯಿ ಮೈನಾವತಿ ಇಂದು ಮುಂಜಾನೆ ಅಸುನೀಗಿದ್ದಾಳೆ.

ತಾಯಿ ಮತ್ತು ಮಗನ ಶವಗಳನ್ನು ಗ್ರಾಮದಲ್ಲಿ ಅಂತಿಮಯಾತ್ರೆ ನಡೆಸಿ ನಂತರ ಅಂತ್ಯಸಂಸ್ಕಾರ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

ABOUT THE AUTHOR

...view details