ಕರ್ನಾಟಕ

karnataka

ETV Bharat / state

ಹಣ ನೀಡಿ ವೋಟು ಪಡೆಯುವ ದುಃಸ್ಥಿತಿಗೆ ಬಿಜೆಪಿ ಬಂದಿಲ್ಲ: ರಾಘವೇಂದ್ರ ತಿರುಗೇಟು - ಉಪಚುನಾವಣೆ

ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​ ಪರ ಪ್ರಚಾರಕ್ಕೆ ಆಗಮಿಸಿದ್ದ ಬಿ.ವೈ.ರಾಘವೇಂದ್ರ, ಬಿಜೆಪಿ ನೋಟು ಕಾಂಗ್ರೆಸ್​​ಗೆ ವೋಟು ಎಂಬ ಆರೋಪಕ್ಕೆ ಉತ್ತರ ಕೊಟ್ಟಿದ್ದು, ಅದು ಕಾಂಗ್ರೆಸ್​​ ಸಂಸ್ಕೃತಿ, ಅಂತಹ ಅನಿವಾರ್ಯತೆ ಇನ್ನು ಬಿಜೆಪಿಗೆ ಬಂದಿಲ್ಲ ಎಂದು ಭರ್ಜರಿ ಆಗಿಯೇ ತಿರುಗೇಟು ನೀಡಿದ್ದಾರೆ.

Raghavendra
ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ

By

Published : Dec 2, 2019, 12:57 PM IST

ಹಾವೇರಿ:ಹಣ ನೀಡಿ ವೋಟು ಹಾಕಿಸಿಕೊಳ್ಳುವ ಅನಿವಾರ್ಯತೆ, ದುಃಸ್ಥಿತಿ ಇನ್ನು ಬಿಜೆಪಿಗೆ ಬಂದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪದಲ್ಲಿ ಮಾತನಾಡಿದ ಅವರು, ಹಿರೇಕೆರೂರು ಭೇಟಿ ವೇಳೆ ಕಾಂಗ್ರೆಸ್ ಮುಖಂಡರು, ಬಿಜೆಪಿ ನೋಟು ಕಾಂಗ್ರೆಸ್​​ಗೆ ವೋಟು ಎಂದು ಹೇಳುತ್ತಿದ್ದಾರೆ. ಆದರೆ, ದುಡ್ಡು ಹಂಚುವುದು ಕಾಂಗ್ರೆಸ್​​ ಸಂಸ್ಕೃತಿ. ಇದೆಲ್ಲ ಜನರನ್ನ ದಾರಿ ತಪ್ಪಿಸಲು ಮಾಡುತ್ತಿರುವ ವಿಧಾನ ಎಂದು ರಾಘವೇಂದ್ರ ಆರೋಪಿಸಿದರು.

ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ

ಜೆಡಿಎಸ್​​ ಕಾಂಗ್ರೆಸ್​​ ಪಕ್ಷಗಳಿಗೆ ತಾವು ಮಾಡುವ ತಪ್ಪುಗಳನ್ನು ಬೇರೆಯವರ ಮೇಲೆ ಎತ್ತಿ ಹಾಕುವುದು ಅವರ ಪದ್ಧತಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅನರ್ಹ ಶಾಸಕರ ಕುರಿತ ಹನಿಟ್ರಾಪ್ ಪೋಸ್ಟ್ ಕುರಿತಂತೆ ಮಾತನಾಡಿದ ಅವರು, ಪ್ರತಿಪಕ್ಷಗಳು ಬಿಜೆಪಿಗೆ ಸೋಲುಣಿಸಲು ಎಲ್ಲ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಪ್ರಜ್ಞಾವಂತ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details